ಎಚ್ಚರ; ರಾಗಿಂಗ್ ನಡೆಸಿದ್ರೆ 2.5ಲಕ್ಷ ರೂ.ದಂಡ-ಎಂಐಟಿ
ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಕಾಲೇಜ್ನಿಂದ ಹೊರಕ್ಕೆ...
ಮಣಿಪಾಲ, ಬುಧವಾರ, 29 ಜುಲೈ 2009( 18:21 IST )
ರಾಗಿಂಗ್ ಪಿಡುಗಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಣಿಪಾಲ್ ಯೂನಿರ್ವಸಿಟಿ ಕಠಿಣ ನಿಲುವು ತಳೆದಿದ್ದು, ಇನ್ನು ಮುಂದೆ ಕಾಲೇಜ್ ಕ್ಯಾಂಪಸ್‌ನಲ್ಲಿ ರಾಗಿಂಗ್ ನಡೆಸಿದಲ್ಲಿ ಅಂತವರಿಗೆ 2.5ಕ್ಷ ರೂಪಾಯಿ ದಂಡ ಹಾಗೂ ಕಠಿಣ ಶಿಕ್ಷೆ ಸೇರಿದಂತೆ ಶಾಲೆಯಿಂದ ಡಿಬಾರ್ ಮಾಡುವುದಾಗಿ ತಿಳಿಸಿದೆ.
ರಾಗಿಂಗ್ ನಡೆಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿಯೂ ಮಣಿಪಾಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಸ್(ಎಂಐಟಿ) ನಿರ್ದೇಶಕ ಬ್ರಿಗೇಡಿಯರ್ ಸೋಮನಾಥ್ ಮಿಶ್ರಾ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಕಾಲೇಜ್ ಕ್ಯಾಂಪಸ್‌ನಲ್ಲಿ ರಾಂಗಿಗ್ ಚಟುವಟಿಕೆಯನ್ನು ವಿದ್ಯಾರ್ಥಿಗಳು ಸಂಪೂರ್ಣ ನಿಲ್ಲಿಸಬೇಕು ಎಂದು ತಿಳಿಸಿದ್ದು, ಅದಕ್ಕಾಗಿ 100ಮಂದಿ ಸದಸ್ಯರ ರಾಗಿಂಗ್ ನಿಗ್ರಹ ಪಡೆಯನ್ನು ರಚಿಸಲಾಗಿದೆ ಎಂದು ಹೇಳಿದೆ.
ರಾಗಿಂಗ್ ನಿಗ್ರಹ ಪಡೆ ನಿರಂತರವಾಗಿ ಹಾಸ್ಟೆಲ್, ಫುಡ್ ಕೋರ್ಟ್ಸ್ ಹಾಗೂ ಕಾಲೇಜ್‌ನ ಎಲ್ಲಾ ಕ್ಯಾಂಪಸ್‌ಗಳಲ್ಲಿಗೂ ಭೇಟಿ ನೀಡಿ ಪರಿಶೀಲಿಸುತ್ತದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.
ಕಾಲೇಜ್ ಕ್ಯಾಂಪಸ್‌ನಲ್ಲಿ ರಾಗಿಂಗ್ ನಿಷೇಧ ಮತ್ತು ದಂಡ ಹೇರಿಕೆ ಆದೇಶ ವಿದ್ಯಾರ್ಥಿಗಳ ಮೇಲೆ ಹೇರಿರುವುದು ಸೂಕ್ಷ್ಮ ವಿಚಾರವಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ ವಿನಾಯಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಯಾವುದೇ ವಿದ್ಯಾರ್ಥಿ ರಾಗಿಂಗ್‌ನಲ್ಲಿ ಶಾಮೀಲಾಗಿದ್ದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.