ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಿನಿಸಮರ; ಜೆಡಿಎಸ್‌ಗೆ ಮೊದಲ ಸೋಲು (JDS | Deve gowda | Kumaraswamy | Congress | BJP)
 
NRB
ರಾಜ್ಯದಲ್ಲಿ ನಡೆಯಲಿರುವ ಐದು ಕ್ಷೇತ್ರಗಳ ಪೈಕಿ ಗೋವಿಂದರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ನಾಗೇಂದ್ರ ಪ್ರಸಾದ್ ಸೇರಿದಂತೆ ಒಟ್ಟು 12 ಮಂದಿಯ ನಾಮಪತ್ರಗಳು ಪರಿಶೀಲನೆ ವೇಳೆ ತಿರಸ್ಕೃತಗೊಂಡಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ಮುನ್ನವೇ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದೆ.

ಕ್ರಮ ಸಂಖ್ಯೆ ಮತ್ತು ಭಾಗದ ಮಾಹಿತಿ ಸಮರ್ಪಕವಾಗಿ ನಮೂದಿಸದ ಕಾರಣ ನಾಗೇಂದ್ರ ಪ್ರಸಾದ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಒಟ್ಟಿನಲ್ಲಿ ಗೋವಿಂದರಾಜನಗರದ 4 ನಾಮಪತ್ರ ಸೇರಿದಂತೆ ರಾಜ್ಯದ 5 ಕ್ಷೇತ್ರಗಳಲ್ಲಿ 12 ನಾಮಪತ್ರಗಳು ತಿರಸ್ಕೃತಗೊಂಡಿದೆ.

ವಿಧಾನಸಭೆಯ ಐದು ಕ್ಷೇತ್ರಗಳಿಗೆ ಆಗಸ್ಟ್ 18ರಂದು ಚುನಾವಣೆ ನಡೆಯಲಿದ್ದು, ಒಟ್ಟು 108 ಮಂದಿ ನಾಮಪತ್ರ ಸಲ್ಲಿಸಿದ್ದರು. ಗುರುವಾರ ನಾಮಪತ್ರ ಪರಿಶೀಲನೆ ನಡೆದಿದ್ದು, ದೋಷ ಇದ್ದ 12 ನಾಮಪತ್ರಗಳನ್ನು ಆಯೋಗ ತಿರಸ್ಕರಿಸಿದೆ.

ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಆಗೋಸ್ಟ್ 1ರಂದು ಮಧ್ನಾಹ್ನ 3ಗಂಟೆವರೆಗೆ ಕಾಲಾವಕಾಶ ಇದೆ. ಪ್ರಸ್ತುತ 96ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿಖರವಾಗಿ ಎಷ್ಟು ಮಂದಿ ಕಣದಲ್ಲಿ ಉಳಿಯಬಹುದು ಎನ್ನುವುದು ಆ.1ರ ಸಂಜೆ ತಿಳಿಯಲಿದೆ. ಗೋವಿಂದರಾಜನಗರ ಅತಿ ಹೆಚ್ಚು ಅಂದರೆ 7ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ ಚಿತ್ತಾಪುರ, ಚನ್ನಪಟ್ಟಣ ತಲಾ ಒಂದು, ರಾಮನಗರದದಲ್ಲಿ ಮೂರು ನಾಮಪತ್ರಗಳು ತಿರಸ್ಕೃತಗೊಂಡಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಬಿ.ವಿ.ಕುಲಕರ್ಣಿ ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ಎಂದು ಮೂವರು ನಾಮಪತ್ರ ಸಲ್ಲಿಸಿದ್ದರು. ಮೂವರಲ್ಲಿ ನಾಗೇಂದ್ರ ಪ್ರಸಾದ್ ಅವರಿಗೆ ಪಕ್ಷ ಬಿ.ಫಾರಂ ನೀಡಿತ್ತು. ಕೆಲವರು ಎರಡು ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ ಜೆಡಿಎಸ್ ಅಧಿಕೃತ ಅಭ್ಯರ್ಥಿ ಕೇವಲ ಒಂದೇ ಒಂದು ಪ್ರತಿಯನ್ನು ಸಲ್ಲಿಸಿದ್ದರು ಎಂದು ಹೇಳಿದರು. ಇದರಿಂದಾಗಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆಯಲಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ