ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉದ್ಯಾನಗರಿಯ ಇನ್ಫೋಸಿಸ್‌ಗೆ ಸಿಐಎಸ್ಎಫ್ ಭದ್ರತೆ (Infosys | CISF | N. R. Narayana Murthy | Bangalore)
 
ಸಾಫ್ಟ್‌ವೇರ್ ದೈತ್ಯ ಕಂಪೆನಿ ಇನ್ಫೋಸಿಸ್ ಸಂಸ್ಥೆಯು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಯ ಸೇವೆಯನ್ನು ಪಡೆದ ಮೊಟ್ಟ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಐಎಸ್ಎಫ್‌ನ ನೂರು ಸಿಬ್ಬಂದಿಗಳು ಔಪಚಾರಿಕವಾಗಿ ಸೇವೆಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್‌ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಅವರು ಹಾಜರಿದ್ದರು.

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕೇಂದ್ರದಲ್ಲಿ ಸಿಐಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡರ್ ಅವರ ನೇತೃತ್ವದಲ್ಲಿ ನೂರು ಮಂದಿ ಸಿಬ್ಬಂದಿಗಳು ಭದ್ರತಾ ಸೇವೆಯನ್ನು ನೀಡಲಿದ್ದಾರೆ.

ಸಿಐಎಸ್‌ಎಫ್ ಸೇವೆಗಾಗಿ ಕಂಪೆನಿಯು ಪ್ರತಿವರ್ಷ 2.5ಕೋಟಿ ರೂಪಾಯಿಗಳನ್ನು ನೀಡಲಿದೆ. ಭಯೋತ್ಪಾದಕರ ನಿಗ್ರಹ ಮತ್ತು ಕಂಪೆನಿಯ ಉಪಕರಣಗಳ ನಾಶಪಡಿಸುವುದನ್ನು ಈ ದಳ ಎಚ್ಚರವಹಿಸಲಿದೆ.

ಮುಂಬೈ ನಗರದಲ್ಲಿ ನಡೆದ ಉಗ್ರರ ದಾಳಿಯ ನಂತರ ಜನವರಿ ತಿಂಗಳಲ್ಲಿ ಸಿಐಎಸ್‌ಎಫ್‌ನ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕಂಪೆನಿಗಳಿಗೂ ರಕ್ಷಣೆ ಒದಗಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆನಂತರ ಮೊಟ್ಟಮೊದಲ ಬಾರಿಗೆ ಸಿಐಎಸ್ಎಫ್ ಇನ್ಫೋಸಿಸ್ ಕಂಪನಿಗಳಿಗೆ ರಕ್ಷಣೆ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಇನ್ಫೋಸಿಸ್ ಸುತ್ತಲೂ ಸಿಐಎಸ್‌ಎಫ್ ಪಡೆಯು ಶಸ್ತ್ರಸಜ್ಜಿತವಾಗಿದ್ದುಕೊಂಡು ರಕ್ಷಣೆ ಒದಗಿಸಲಿದೆ. ಕ್ಷಿಪ್ರ ಕಾರ್ಯಾಚರಣೆಗೂ ತಂಡ ಮತ್ತು ಕಮಾಂಡೋ ಘಟಕಗಳ ನೆರವನ್ನು ಪಡೆದುಕೊಳ್ಳಲಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ