ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯ ಕಾಳಗ;ಕಾಂಗ್ರೆಸ್ ಮುಖಂಡನ ಬಂಧನ (BJP | Congress | JDS | Yeddyurappa | Gulbarga)
 
ರಾಜ್ಯ ವಿಧಾನಸಭೆಯ ಮಿನಿಸಮರದ ಪ್ರಚಾರ ರಂಗೇರತೊಡಗಿದಂತೆ ಗುಲ್ಬರ್ಗಾ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಬೆಂಬಲ ಕುರಿತಂತೆ ನಡೆದ ರಾಜಕೀಯ ಕಾಳಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ‌ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ್ ಅವರು ಭಾನುವಾರ ಸಂಜೆ ಚಿತ್ತಾಪುರ್ ಎಪಿಎಂಸಿ ಆವರಣದಲ್ಲಿ ನಿಂತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಾಯಿಬಣ್ಣ ಎಂಬಾತ 15ಮಂದಿ ತಂಡದೊಂದಿಗೆ ಆಗಮಿಸಿ ಸಿನಿಮೀಯ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಕಾಂಗ್ರೆಸ್ ಮುಖಂಡರಾಗಿರುವ ಸಾಯಿಬಣ್ಣ ಹಾಗೂ ಗ್ರಾ.ಪಂ.ಮಾಜಿ ಅಧ್ಯಕ್ಷ ಬಸವರಾಜ್ ಅವರ ರಾಜಕೀಯ ಕುರಿತಂತೆ ಮಾತಿನ ಘರ್ಷಣೆ ನಡೆದಿತ್ತು. ಬಸವರಾಜ್ ಅವರು ಕಾಂಗ್ರೆಸ್ ಪಕ್ಷದವರಾಗಿದ್ದರೂ ಕೂಡ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದು ಸಾಯಿಬಣ್ಣ ಆರೋಪ. ಈ ವಿಚಾರದಲ್ಲಿಯೇ ಸಾಕಷ್ಟು ಘರ್ಷಣೆ ನಡೆದಿತ್ತು.

ಆ ನಿಟ್ಟಿನಲ್ಲಿ ಗ್ರಾ.ಪ.ಮಾಜಿ ಅಧ್ಯಕ್ಷರ ಮೇಲೆ ನಡೆಸಿದ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಸಾಯಿಬಣ್ಣನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ಮುಖಂಡನ ಬಂಧನದ ಕುರಿತಂತೆ ಕಾಂಗ್ರೆಸ್ ಹರಿಹಾಯ್ದಿದ್ದು, ಇವೆಲ್ಲ ಬಿಜೆಪಿಯ ಚುನಾವಣಾ ಗಿಮಿಕ್ ಎಂದು ದೂರಿದೆ. ಸಣ್ಣ ವಿಷಯಗಳಿಗೆ ರಾಜಕೀಯ ಬಣ್ಣ ಬಳಿದು ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. ಅದೇ ರೀತಿ ಬಿಜೆಪಿ ಕೂಡ ತಿರುಗೇಟು ನೀಡಿದ್ದು, ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ವಿವಾದವನ್ನು ಹುಟ್ಟುಹಾಕುತ್ತಿದೆ. ಬಸವರಾಜ್ ಅವರು ಬಿಜೆಪಿ ಬೆಂಬಲಿಗರಲ್ಲ. ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದಾರೆ. ಆದರೂ ಕಾಂಗ್ರೆಸ್ ರಾಜಕೀಯಕ್ಕಾಗಿ ಇಂತಹ ವಿವಾದ ಹುಟ್ಟುಹಾಕುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ