ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಅಭ್ಯಸಿಸುತ್ತಿರುವ ಮಲೇಷ್ಯಾ ವಿದ್ಯಾರ್ಥಿಗೆ ಎಚ್1ಎನ್1 ವೈರಸ್ (ಹಂದಿಜ್ವರ) ಸೋಂಕು ತಗಲಿರುವ ಬಗ್ಗೆ ಶಂಕಿಸಲಾಗಿದೆ.
ಇತ್ತೀಚೆಗೆ ರಜೆಯ ಸಮಯದಲ್ಲಿ ಮಲೇಷ್ಯಾಕ್ಕೆ ತೆರಳಿದ್ದ ಈ ವಿದ್ಯಾರ್ಥಿ ಮಂಗಳೂರಿಗೆ ವಾಪಸ್ ಆದ ಬಳಿಕ ಉಸಿರಾಟದ ತೊಂದರೆ ಮತ್ತಿತರ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅಲ್ಲಿಂದ ನಗರಕ್ಕೆ ಕರೆತರಲಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಎಚ್1ಎನ್1 ಸೋಂಕು ಇರುವುದು ಇನ್ನೂ ದೃಢಪಟ್ಟಿಲ್ಲ. ಪರೀಕ್ಷಾ ವರದಿಗಳು ಇನ್ನು ಎರಡು ದಿನದಲ್ಲಿ ಲಭಿಸಿದ ಬಳಿಕವೇ ಹೇಳಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈತ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
ಈ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಮಂಗಳೂರು ಜನತೆ ಭಯ ಭೀತರಾಗಿದ್ದಾರೆ. ಈ ನಡುವೆ ಈ ಬಗ್ಗೆ ಯಾವುದೇ ಆತಂಕ ಪಡೆಬೇಕಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.