ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಮೆ ಸ್ಥಾಪನೆಯಿಂದ ಅಪನಂಬಿಕೆ ದೂರ: ಸಿಎಂ (Thiruvalluvar | Sarvajna | BJP | Yeddyurappa | Tamil nadu)
 
NRB
ಸರಸ್ವತಿಯ ಸುಪುತ್ರರಾದ ಸರ್ವಜ್ಞ ಹಾಗೂ ತಿರುವಳ್ಳುವರ್ ಆಯಾ ಭಾಷೆಗೆ ಮಾತ್ರ ಸೇರಿದವರಲ್ಲ ಅವರಿಬ್ಬರ ಪ್ರತಿಮೆಗಳ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಇದ್ದಿರಬಹುದಾದ ಅಸಹನೆ, ಅಪನಂಬಿಕೆ ದೂರವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಈ ಪ್ರತಿಮೆಗಳ ಸ್ಥಾಪನೆಯಿಂದ ಒಂದು ದಿವ್ಯ ಸಂದೇಶವನ್ನು ನೀಡಬಹುದಾಗಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಡಿಯೂರಪ್ಪ, ನೆನೆಗುದಿಗೆ ಬಿದ್ದಿರುವ ಶ್ರೇಷ್ಠ ಸಂತ ಕವಿಗಳ ಪ್ರತಿಮೆಗಳ ಅನಾವರಣ ವಿಚಾರದಲ್ಲಿ ಎದ್ದಿರುವ ಭಿನ್ನಾಭಿಪ್ರಾಯ ನಿವಾರಣೆಗೆ ಈ ಸಭೆ ಕರೆಯಲಾಗಿತ್ತು.

ತಿರುವಳ್ಳುವರ್ ಪ್ರತಿಮೆ ವಿರೋಧಿಸುವವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ತಮಿಳುನಾಡಿನಲ್ಲೂ ಹಾಗೆಯೇ ಆಲೋಚಿಸುವ ಜನರಿದ್ದಾರೆ. ಸರ್ವಜ್ಞ ಮತ್ತು ತಿರುವಳ್ಳುವರ್ ಎಂಬ ಮಹಾದಾರ್ಶನಿಕರ ವಿಚಾರಗಳೇ ಆ ಭಾವನೆಗಳನ್ನು ಸಂತೈಸುವ ಶಕ್ತಿ ಪಡೆದಿವೆ. ಅದೇ ಮಾರ್ಗದರ್ಶನ ಮಾಡುತ್ತವೆ ಎಂದರು.

ತಾವು ಇತ್ತೀಚೆಗೆ ಭೇಟಿ ನೀಡಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಜೊತೆ ಚರ್ಚಿಸಿ ಈ ಪ್ರತಿಮೆಗಳ ಸ್ಥಾಪನೆಗೆ ದಿನಾಂಕ ನಿಗದಿ ಪಡಿಸಿರುವುದಾಗಿ ಅವರು ಹೇಳಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ