ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಸರ್ಕಾರ ಈ ಕೂಡಲೇ ಶ್ವೇತಪತ್ರ ಪ್ರಕಟಿಸುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ,ಪಾವತಿಯಾಗದೆ ಉಳಿದ ಬಿಲ್‌ಗಳು ಸಾಕಷ್ಟಿವೆ ಹಾಗಾಗಿ ಸರ್ಕಾರ ಶ್ವೇತಪತ್ರ ಪ್ರಕಟಿಸಲಿ ಎಂದರು.
ಸರ್ಕಾರ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಹೇಳುವ ದಾಖಲಾತಿಗಳು ತಮ್ಮ ಬಳಿ ಇವೆ. ಅಗತ್ಯ ಬಿದ್ದರೆ ಕಪ್ಪು ಪತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ 700ರಿಂದ 800 ಕೋಟಿ ಬಿಲ್‌ಗಳು ಬಾಕಿ ಇದೆ ಎಂದು ಆರೋಪಿಸಿದ ಅವರು ಈ ಆರೋಪ ಸುಳ್ಳು ಎನ್ನುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸವಾಲು ಹಾಕಿದರು.
ವಿಧಾನಸಭಾ ಅಧಿವೇಶನದಲ್ಲೂ ವಿರೋಧ ಪಕ್ಷಗಳ ಯಾವುದೇ ಪ್ರಸ್ತಾಪಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿಲ್ಲ ಎಂದು ಟೀಕಿಸಿದ ಅವರು ಲಿಖಿತ ಹೇಳಿಕೆಗಳನ್ನು ಮಂಡಿಸಲಾಯಿತು.