ಮುಂದಿನ ಜೂನ್ವರೆಗೆ ಬೆಂಗಳ್ಳೂರ್ನಲ್ಲಿ ಪವರ್ ಕಟ್ ಇಲ್ಲ...
ಬೆಂಗಳೂರು, ಮಂಗಳವಾರ, 4 ಆಗಸ್ಟ್ 2009( 11:12 IST )
NRB
ಮುಂದಿನ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ 14ಗಂಟೆಗಳ ಕಾಲ ವಿದ್ಯುತ್ ಪೂರೈಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಪ್ರತಿದಿನ 10 ಗಂಟೆ ಲೋಡ್‌ಶೆಡ್ಡಿಂಗ್ ಜಾರಿ ಮಾಡುವುದಾಗಿ ಸೋಮವಾರ ಪ್ರಕಟಿಸಿದೆ. ಬೆಂಗಳೂರು ಹೊರತುಪಡಿಸಿ ಇತರ ನಗರ ಪ್ರದೇಶದಲ್ಲಿ ಎರಡು ಗಂಟೆ ಪವರ್ ಕಟ್ ಜಾರಿಯಾಗಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ಗ್ರಾಮೀಣ ಪ್ರದೇಶದಲ್ಲಿ 7ಗಂಟೆ ಸಿಂಗಲ್ ಫೇಸ್ ಮತ್ತು 7ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ನಿರಂತರವಾಗಿ 24ಗಂಟೆಗಳ ಕಾಲವೂ ವಿದ್ಯುತ್ ನೀಡಲಾಗುವುದು. ರಾಜ್ಯದ ಇತರೆ ನಗರಗಳಲ್ಲಿ 22 ಗಂಟೆಗಳು ಕಾಲ ವಿದ್ಯುತ್ ಪೂರೈಸಿ, ಎರಡು ಗಂಟೆ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ನಿತ್ಯ 40ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾದಿಸುವ ಅಂದಾಜಿನ ಮೇಲೆ ಗ್ರಾಮೀಣ ಪ್ರದೇಶದಲ್ಲಿ 14ಗಂಟೆ ಪವರ್ ಕಟ್ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಈಶ್ವರಪ್ಪ ಪ್ರಕಟಿಸಿದ್ದರು. ಈ ಹೇಳಿಕೆ ಪ್ರತಿಪಕ್ಷ ಸೇರಿದಂತೆ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.