ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯ ಒಳಗಿದ್ದ ಮೂವರು ಮಕ್ಕಳು ಸಜೀವವಾಗಿ ದಹನವಾದ ಘಟನೆ ನಗರದ ರಾಮಮೂರ್ತಿ ನಗರದಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ರಾಮಮೂರ್ತಿ ನಗರದ ವಿಜಿನಾಪುರದಲ್ಲಿ ಇಂದು ಬೆಳಿಗ್ಗೆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಉಸಿರುಗಟ್ಟಿ ಸಜೀವವಾಗಿ ಸುಟ್ಟುಹೋದ ದಾರುಣ ಘಟನೆ ಸಂಭವಿಸಿದೆ.
ಮಕ್ಕಳ ತಾಯಿ ಕೂಲಿ ಕೆಲಸಕ್ಕೆ ಹೊರ ಹೋಗುವಾಗ ಮಕ್ಕಳನ್ನು ಮನೆಯ ಒಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದರು. ಆ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಾಗ ಮಕ್ಕಳು ಜೀವಂತವಾಗಿ ಸುಟ್ಟು ಹೋಗಿವೆ. ಸ್ಥಳಕ್ಕೆ ರಾಮಮೂರ್ತಿ ನಗರದ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮನೆಗೆ ಬೆಂಕಿ ಹೊತ್ತಿಕೊಂಡು ಮಕ್ಕಳು ಸುಟ್ಟು ಹೋಗಿದ್ದ ಘಟನೆಯ ಕೆಲವು ಗಂಟೆಗಳಾಗಿದ್ದರು ಕೂಡ ತಾಯಿಗೆ ವಿಷಯ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.