ಆಗಸ್ಟ್ 9ರಂದು ಬೆಂಗಳೂರಿನಲ್ಲಿ ನಡೆಯುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಉಪಸ್ಥಿತಿಯಲ್ಲೇ ನಡೆಯಲಿದೆ.
ಕನಕಪುರ ರಸ್ತೆಯಲ್ಲಿರುವ ಪುತ್ರಿ ಸೆಲ್ವಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿ ಅವರನ್ನು ಮಂಗಳವಾರ ಸಂಜೆ ಯಡಿಯೂರಪ್ಪ ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಮೆ ಅನಾವರಣ ಸಂಬಂಧ ಚರ್ಚೆ ನಡೆಸಿ 9ರಂದು ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಇದಕ್ಕೆ ಕರುಣಾನಿಧಿಯವರು ಸಮ್ಮತಿ ಸೂಚಿಸಿದರು. ಜೊತೆಗೆ ಆಗಸ್ಟ್ 13ರಂದು ಚನ್ನೈನಲ್ಲಿ ನಡೆಯುವ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಯಡಿಯೂರಪ್ಪ ಅವರನ್ನು ಕರುಣಾನಿಧಿ ಕೋರಿದರು ಎಂದು ತಿಳಿಸಿದ್ದಾರೆ.
ಸಿಎಂಗೆ ಶಬ್ಬಾಸ್‌ಗಿರಿ: ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆ ಅನಾವರಣ ವಿವಾದಕ್ಕೆ ತಾತ್ವಿಕ ತೆರೆ ಎಳೆಯಲು ಮುಂದಾಗಿರುವ ಯಡಿಯೂರಪ್ಪ ಅವರಿಗೆ ರಾಜ್ಯದ ತಮಿಳು ಸಂಘಟನೆಗಳು ಶಬ್ಬಾಸ್‌ಗಿರಿ ನೀಡಿವೆ.
ಮಂಗಳವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿದ ರಾಜ್ಯದ 13 ಜಿಲ್ಲೆಗಳ ವಿವಿಧ ತಮಿಳು ಸಂಘಟನೆಗಳ ಪದಾಧಿಕಾರಿಗಳು ಯಡಿಯೂರಪ್ಪ ಅವರನ್ನು ಅಭಿನಂದಿಸಿದರು.
ಎಲ್ಲಾ ಪಕ್ಷಗಳು, ಸಾಹಿತಿ, ಹೋರಾಟಗಾರರ ಬೆಂಬಲ ಪಡೆದು 18ವರ್ಷದ ಸಮಸ್ಯೆಗೆ ಅಂತ್ಯ ಹಾಡುವ ಸಿ.ಎಂ.ಪ್ರಯತ್ನ ಮೆಚ್ಚುವಂಥದ್ದು ಎಂದು ತಮಿಳು ಸಂಘಟನೆಗಳ ಒಕ್ಕೂಟದ ಸದಸ್ಯ ದಾಮೋದರ್ ಪ್ರತಿಕ್ರಿಯಿ ವ್ಯಕ್ತಪಡಿಸಿದರು.