ರಾಜ್ಯದಲ್ಲಿ ಆಗಸ್ಟ್ 18ರಂದು ನಡೆಯುವ ವಿಧಾನಸಭಾ ಉಪಚುನಾವಣೆಯಲ್ಲಿ ನಮಗೆ ಜೆಡಿಎಸ್ ನೇರ ಪ್ರತಿಸ್ಪರ್ಧಿಯೇ ಹೊರತು ಬಿಜೆಪಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲದ ಗೋವಿಂದರಾಜ ನಗರ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆಯಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮುಜರಾಯಿ ಸಚಿವರಾಗಿದ್ದವರು ನಂತರದ ಚುನಾವಣೆಯಲ್ಲಿ ಗೆದ್ದ ಉದಾಹರಣೆಯೇ ಇಲ್ಲ. ಅದೇ ರೀತಿ ಇದೀಗ ಮುಜರಾಯಿ ಸಚಿವರಾಗಿರುವ ಗೋವಿಂದರಾಜನಗರ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಸಚಿವ ವಿ. ಸೋಮಣ್ಣ ಗೆಲ್ಲುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಮರುಜನ್ಮ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರ ದಾಹದಿಂದ ಸೋಮಣ್ಣ ಬಿಜೆಪಿ ಸೇರಿದ್ದಾರೆ. ಅಧಿಕಾರಕ್ಕಾಗಿ ಹೋದ ಸೋಮಣ್ಣ, ಸ್ವಾಮೀಜಿಗಳು ಹೇಳಿದರು ಎಂದು ಹಿರಿಯರ ಮಾನ ಕಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.