ಮತಾಂತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗಂಗಾಶ್ರೀಗಳನ್ನು ಹೋಲಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಗ್ರಂಥಾಲಯ ಸಚಿವ ಶಿವನಗೌಡ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶತಾಯುಷಿ ಶ್ರೀಗಳು ಎಲ್ಲಾ ಜಾತಿ-ಧರ್ಮದವರನ್ನು ತಮ್ಮೊಂದಿಗೆ ಸನ್ಮಾರ್ಗದತ್ತ ಕರೆದೊಯ್ಯುತ್ತಿದ್ದು, ಅಂಥವರನ್ನು ಮದರ್ ತೆರೇಸಾರಂಥವರಿಗೆ ಹೋಲಿಕೆ ಮಾಡಬಾರದು ಎಂದು ಹೇಳಿದರು.
ರಾಯಚೂರು ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ ಗುರುವಂದನಾ ಸಮಾರಂಭದಲ್ಲಿ ಮಾತನಾಡುತ್ತ, ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಬೇಕಾಗಿದೆ. ಅನ್ನ, ಜ್ಞಾನ ದಾಸೋಹ ನಡೆಸಿಕೊಂಡು ಬಂದಿರುವ ಶ್ರೀಗಳು ಸಾವಿರಾರು ಬಡಮಕ್ಕಳ ಪಾಲಿಗೆ ದೇವರಾಗಿದ್ದಾರೆ ಎಂದರು.
ತ್ರಿವಿಧ ದಾಸೋಹಿಗಳಾದ ಸಿದ್ದಗಂಗಾಶ್ರೀಗಳನ್ನು ಮದರ್ ತೆರೇಸಾ ಜೊತೆ ಹೋಲಿಸುವುದಕ್ಕೆ ನನ್ನ ತೀವ್ರ ಆಕ್ಷೇಪ ಇದೆ ಎಂದು ಸಚಿವ ನಾಯಕ್ ಹೇಳಿದರು.