ಪೊಲೀಸರು ರಾಜಕೀಯ ಭದ್ರತೆ ಮತ್ತಿತರ ಭದ್ರತೆಗೆ ಬಳಸಿಕೊಳ್ಳುವುದನ್ನು ಬಿಟ್ಟು ಅವರ ಪಾಡಿಗೆ ಅವರಿಗೆ ವಹಿಸಿರುವ ಕೆಲಸ ಮಾಡಲು ಬಿಡಿ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆಯಿತು.
ಜಾಮೀನು ರಹಿತ ವಾರಂಟ್ ಜಾರಿ ಕುರಿತಂತೆ ವಿಚಾರಣೆ ವೇಳೆ ಈ ಅನಿಸಿಕೆ ವ್ಯಕ್ತಪಡಿಸಿದ ನ್ಯಾ.ದಿನಕರನ್, ಹೀಗಾದರೆ ಇಂತಹ ಸಮಸ್ಯೆಗಳೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ತಮಿಳುನಾಡಿನಲ್ಲಿ ಜಾಮೀನು ರಹಿತ ವಾರಂಟ್‌ಗಳನ್ನು ಜಾರಿ ಮಾಡಲೆಂದೇ ಪ್ರತ್ಯೇಕವಾಗಿ ಪೊಲೀಸರನ್ನು ನೇಮಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮಾಡಿದರೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.