ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಬ್‌ಗಳಲ್ಲಿ ಮಾನಿನಿಯರಿಗೆ ತೊಂದ್ರೆ ಕೊಟ್ರೆ ಹುಷಾರ್! (Bangalore | pubs | restaurants | Karnataka | High Court)
 
ಉದ್ಯಾನನಗರಿಯಲ್ಲಿನ ಪಬ್, ಬಾರ್‌ಗಳಲ್ಲಿ ಮದಿರೆ ಸರಬರಾಜು ಮಾಡುವ ಯುವತಿಯರೊಂದಿಗೆ ಅಸಭ್ಯ ವರ್ತನೆ, ಪೋಕರಿತನ ತೋರಿದಲ್ಲಿ ಇನ್ನು ಮುಂದೆ ಪರವಾನಿಗೆ ಹೊಂದಿದ ಶಸ್ತ್ರಸಜ್ಜಿತ ರಕ್ಷಕ ಭಟರನ್ನು ನಿಯೋಜಿಸಲಿದೆ ಹುಷಾರ್!

ಲೈವ್ ಬ್ಯಾಂಡ್ ಸೇರಿದಂತೆ ಬಾರ್, ಪಬ್‌ಗಳಲ್ಲಿ ಮದಿರೆಯನ್ನು ಸರಬರಾಜು ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ 2008ರ ಸೆಪ್ಟೆಂಬರ್‌ನಂದು ಮಹತ್ವದ ತೀರ್ಪು ನೀಡುವ ಮೂಲಕ, ಮಹಿಳೆಯರಿಗೂ ಸಮಾನ ಸ್ಥಾನಮಾನ ದೊರೆಯಬೇಕು ಎಂಬ ಬೇಡಿಕೆಯನ್ನು ಎತ್ತಿ ಹಿಡಿದಿತ್ತು.

ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ20(2)ರ ಅನ್ವಯ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡದಂತೆ ನಿಷೇಧ ಹೇರುವುದು ಸಂವಿಧಾನ ಬಾಹಿರ ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು , ಯಾವುದೇ ಷರತ್ತುಗಳಿಲ್ಲದೆ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಆದೇಶ ನೀಡಿದ್ದರು.

ಅಬಕಾರಿ ಕಾಯ್ದೆಯನ್ವಯ ಮಹಿಳೆಯರು ಬಾರ್‌ಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಲೈವ್ ಬ್ಯಾಂಡ್ ಅಸೋಸಿಯೇಶನ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಆ ನಿಟ್ಟಿನಲ್ಲಿ ಬಾರ್, ಪಬ್‌ಗಳಲ್ಲಿ ಮದಿರೆ ಸರಬರಾಜು ಮಾಡುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡುವ ನಿಟ್ಟಿನಲ್ಲಿ ಪರವಾನಿಗೆಯ ಪಿಸ್ತೂಲ್, ಗನ್‌ಗಳನ್ನು ಹೊಂದಿದ ರಕ್ಷಣಾ ಭಟರನ್ನು ನಿಯೋಜಿಸುವ ಕ್ರಮಕ್ಕೆ ಬಾರ್ ಮಾಲೀಕರು ಮುಂದಾಗಿದ್ದಾರೆ.

ರೆಸ್ಟೋರೆಂಟ್‌ಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನ ಚಲನ-ವಲನದ ಮೇಲೆ ಈ 'ಬೌನ್ಸರ್ಸ್‌'ಗಳು ಹದ್ದಿಗಣ್ಣಿಟ್ಟಿರುತ್ತಾರೆ. ಬಾರ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರಿಗೆ ರಕ್ಷಣೆ ನೀಡುವುದೇ ನಮ್ಮ ಪ್ರಥಮ ಆದ್ಯತೆ ಎಂದು ಬಾರ್ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾರ್ ಅಥವಾ ಪಬ್‌ಗಳಲ್ಲಿ ಗ್ರಾಹಕರು ಪೋಕರಿತನದಿಂದ ವರ್ತಿಸಿದ ಸಂದರ್ಭದಲ್ಲಿ ಆಯುಧಗಳನ್ನು ಉಪಯೋಗಿಸಲು ನಿರ್ದೇಶನ ನೀಡಲಾಗಿದೆ ಎಂದು ಬೆಂಗಳೂರು ನಗರದ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಬಾರ್‌ಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ಪರಿಸ್ಥಿತಿ ಮಿತಿಮೀರಿದಾಗ ಮುನ್ನೆಚ್ಚರಿಕೆ ಅಂಗವಾಗಿ ಅಂತಹ ಸಂದರ್ಭದಲ್ಲಿ ಉಪಯೋಗಿಸಲು ಪರವಾನಿಗೆ ಹೊಂದಿರುವ ಪಿಸ್ತೂಲ್ ಹಾಗೂ ಗನ್‌ಗಳನ್ನು ನೀಡಲಾಗಿದೆ ಎಂದು ಸಿಂಗ್ ವಿವರಿಸಿದರು.

ಮಹಿಳೆಯರು ಕಾರ್ಯನಿರ್ವಹಿಸುವ ಬಾರ್, ಪಬ್‌ಗಳಲ್ಲಿ ಪದೇ, ಪದೇ ಅಹಿತಕರ ಘಟನೆ ನಡೆಯುತ್ತಿದ್ದಲ್ಲಿ ಅದರಿಂದ ರೆಸ್ಟೋರೆಂಟ್ ಪರವಾನಿಗೆ ರದ್ದುಗೊಳ್ಳುವುದೆಂಬ ಅರಿವು ತಮಗಿದೆ ಎಂದು ಹೇಳಿದರು.

ಯಾವುದೇ ಸಂದರ್ಭದಲ್ಲಿ ಮಹಿಳೆಯರು ಕರ್ವವ್ಯ ನಿರ್ವಹಿಸುವ ಬಾರ್‌ಗಳಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಸ್ವಂತ ಸೆಕ್ಯುರಿಟಿ ವ್ಯವಸ್ಥೆಯನ್ನು ಮಾಡಿಕೊಂಡಿರುವುದಾಗಿ ಬೆಂಗಳೂರು ನಗರದಲ್ಲಿನ ರೆಸ್ಟೋರೆಂಟ್‌ವೊಂದರ ಮಾಲೀಕರಾಗಿರುವ ಸಂಜಯ್ ಕೋಚಾರ್ ತಿಳಿಸಿದರು.

ಬಾರ್‌ಗಳಲ್ಲಿನ ಮಹಿಳೆಯರಿಗೆ ಅಂಗರಕ್ಷಕರ ವ್ಯವಸ್ಥೆ ಹಾಗೂ ಶಿಫ್ಟ್ ಮುಗಿದ ಬಳಿಕ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದ್ದು, ಅದರಂತೆ ಮುನ್ನೆಚ್ಚರಿಕೆ ಅಂಗವಾಗಿ ಎಲ್ಲಾ ಬಾರ್‌ಗಳಲ್ಲಿಯೂ ಸ್ವಂತವಾಗಿ ರಕ್ಷಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ