NRB ಮಹಾನ್ ದಾರ್ಶನಿಕರಾಗಿರುವ ಸರ್ವಜ್ಞ ಹಾಗೂ ತಿರುವಳ್ಳುವರ್ ಅವರುಗಳು ಯಾವುದೇ ಭಾಷೆ, ಧರ್ಮ ಹಾಗೂ ರಾಜ್ಯಕ್ಕೆ ಸೀಮಿತರಾದವರಲ್ಲ. ಅವರು ವಿಶ್ವಮಾನ್ಯರು ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದರು. ಅವರು ಭಾನುವಾರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಿದ್ದರು.ಪ್ರತಿಮೆ ಅನಾವರಣಗೊಳ್ಳಲು ಕಾರಣೀಭೂತರಾದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮನದುಂಬಿ ಅಭಿನಂದಿಸಿದ ಕರುಣಾನಿಧಿ ಅವರು ಪ್ರತಿಮೆ ಅನಾವರಣದ ಮೂಲಕ ತನ್ನ ಬಹುದಿನಗಳ ಆಸೆ ನೆರವೇರಿದಂತಾಗಿದೆ ಎಂದು ಭಾವುಕರಾಗಿ ನುಡಿದರು. ಹದಿನೆಂಟು ವರ್ಷಗಳ