ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಣ್ಣ ಬದಲಿಸಲೊಲ್ಲದೆ ಮುನಿದ ಆಟೋಗಳ ಮುಷ್ಕರ (Auto strike | Bangalore | Colour | R Ashok)
Feedback Print Bookmark and Share
 
ಆಟೋರಿಕ್ಷಾಗಳ ಬಣ್ಣ ಬದಲಾಯಿಸಬೇಕೆಂಬ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೋ ಚಾಲಕರು ಸೋಮವಾರ ದಿನವೀಡೀ ಮುಷ್ಕರ ನಡೆಸುತ್ತಿದ್ದಾರೆ.
PTI

ಆಟೋಗಳ ಬಣ್ಣ ಬದಲಿಸುವಂತೆ ಸುತ್ತೋಲೆ ಹೊರಡಿಸಿರುವ ಸಾರಿಗೆ ಇಲಾಖೆಯ ಕ್ರಮ ಖಂಡಿಸಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಟೋರಿಕ್ಷಾ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿಸದ್ದು, ಸುಮಾರು 1 ಲಕ್ಷ ಆಟೋ ಚಾಲಕರು ಪಾಲ್ಗೊಂಡಿದ್ದಾರೆ. ಪ್ರಸ್ತುತ ಆಟೋಗಳಲ್ಲಿ ಈಗಿರುವ ಕಪ್ಪು ಬಣ್ಣ ಬದಲಾಯಿಸಿ ಹಸಿರು ಬಣ್ಣ ಹಾಕಲು ಹೆಚ್ಚಿನ ಖರ್ಚಾಗುತ್ತದೆ. ಇದರಿಂದ ಬಡ ಚಾಲಕರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಆರೋಪಿಸಿ ಮಾಲೀಕರು, ಚಾಲಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಈ ನಡುವೆ ಆಟೋ ಚಾಲಕರಿಗೆ ನೀಡುತ್ತಿರುವ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದರಿಂದ ಈಗಾಗಲೇ ಸಾವಿರಾರು ರೂ. ಖರ್ಚು ಮಾಡಲಾಗುತ್ತಿದೆ. ಇದರ ಜೊತೆಗೆ ಈ ಸುತ್ತೋಲೆ ಹೊರಡಿಸಿರುವುದು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ ಎಂಬುದು ಆಟೋ ಚಾಲಕರ ಸಂಘಟನೆಗಳ ಆರೋಪವಾಗಿದೆ.

ಪರಿಣಾಮ:
ಆಟೋ ಚಾಲಕರ ಮುಷ್ಕರದಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮುಷ್ಕರದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸಂಘಟನೆಗಳು ಚಾಲಕರಿಗೆ ಸೂಚನೆ ನೀಡಿದರೂ, ಕೆಲ ಆಟೋ ಚಾಲಕರು ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದ ದೃಶ್ಯ ಕಂಡು ಬರುತ್ತಿದೆ.

ಸಂಬಂಧಿತ ಮಾಹಿತಿ ಹುಡುಕಿ