ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಪ್ರವಾಹ ವರದಿ ಕಳಿಸಿದ್ದು ಲೇಟಾಗಿ: ಮೊಯ್ಲಿ (Moily | flood report | delay | Karnataka Govt)
Feedback Print Bookmark and Share
 
NRB
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಕುರಿತು ವಿಸ್ತೃತ ವರದಿಯನ್ನು ಕಳುಹಿಸುವಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ವಿಳಂಬ ಮಾಡಿದೆ ಎಂಬುದಾಗಿ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ದೂರಿದ್ದಾರೆ.

ತನ್ನ ತವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ವರದಿಯಾಧಾರದಲ್ಲಿ ಕೇಂದ್ರವು ತಕ್ಷಣ ಪರಿಸ್ಥಿತಿಯ ಅವಲೋಕನಕ್ಕೆ ತಂಡವನ್ನು ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದ್ದಾರೆ. ರಾಜ್ಯವು ಕೇಂದ್ರದ ವಿಪತ್ತು ಪರಿಹಾರ ನಿಧಿ(ಸಿಆರ್‌ಎಫ್)ಯಿಂದ ಹಣವನ್ನು ಬಳಸಿಕೊಳ್ಳಬಹುದು ಮತ್ತು ಸರ್ಕಾರವು ವಿನಿಯೋಗಿಸಿದ ಸಂಪೂರ್ಣ ಹಣವನ್ನು ಕೇಂದ್ರವು ಭರಿಸಲಿದೆ ಎಂದು ಅವರು ತಿಳಿಸಿದರು.

ಪ್ರವಾಹ ಪೀಡಿತ ಮಂದಿಗೆ ಸಹಾಯ ನೀಡಲು ರಾಜ್ಯಸರ್ಕಾರದೊಂದಿಗೆ ಕೈಜೋಡಿಸಿ ಜಂಟಿಯಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ನುಡಿದ ಅವರು ಇದರಲ್ಲಿ ರಾಜಕೀಯ ಇಲ್ಲ ಎಂದು ನಡಿದರು, ಅಲ್ಲದೆ ಕೇಂದ್ರವು ಪ್ರವಾಹಪೀಡಿತ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಕೇಂದ್ರವು ಮಲತಾಯಿ ಧೋರಣೆ ತಳೆದಿಲ್ಲ ಎಂದು ಕೇಂದ್ರವನ್ನು ಸಮರ್ಥಿಸಿಕೊಂಡರು.

ಕೇಂದ್ರವು ಇದೀಗಾಗಲೇ ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪ್ರವಾಹ ಬಲಿಪಶುಗಳ ಅವಶ್ಯಕತೆಗೆ ಅನುಸಾರವಾಗಿ ಕೇಂದ್ರವು ಇಂತಹ ಹಲವು ಪ್ಯಾಕೇಜುಗಳನ್ನು ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು. ಪ್ರವಾಹ ಪೀಡಿತರಿಗೆ ಸರ್ವರೀತಿಯ ಸಹಾಯ ಕಲ್ಪಿಸಲು ಯುಪಿಎ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.

ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಹಣ ಸಂಗ್ರಹಕ್ಕೆ ಮುಂದಾಗುತ್ತಿದ್ದು, ಇಂತಹ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ