ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಗೌರವ ನೀಡ್ತಿಲ್ಲ: ಉಗ್ರಪ್ಪ (VS Ugrappa | BS Yediyurappa | Karnataka | Congress)
Feedback Print Bookmark and Share
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಡವಳಿಕೆಗಳನ್ನು ಗಮನಿಸುವಾಗ ಅವರಿಗೆ ಪ್ರತಿಪಕ್ಷಗಳ ಮೇಲೆ ಕಿಂಚಿತ್ತೂ ಗೌರವವಿದ್ದಂತೆ ಕಾಣುತ್ತಿಲ್ಲ ಎಂದು ವಿಧಾನ ಪರಿಷತ್ ನಾಯಕ ವಿ.ಎಸ್. ಉಗ್ರಪ್ಪ ಅಭಿಪ್ರಾಯಪಟ್ಟರು.
NRB


ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಯವರಿಗೆ ತನ್ನ ಬೇಳೆ ಬೇಯಿಸಿಕೊಳ್ಳಲು ರಾಜಧಾನಿಯತ್ತ ನಿಯೋಗಗಳನ್ನು ಒಯ್ಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ ಅವರು, ವಿರೋಧ ಪಕ್ಷಗಳ ಕುರಿತು ಅವರಿಗೆ ಕೊಂಚವೂ ಗೌರವವಿದ್ದಂತೆ ತೋರುತ್ತಿಲ್ಲ ಎಂದು ಹೀಗಳೆದರು.

ಮಾತು ಮಾತಿಗೆ ದೆಹಲಿಯತ್ತ ನಿಯೋಗ ಎಂಬ ಅಣಿಮುತ್ತುಗಳನ್ನುದುರಿಸುವ ಸಿಎಂ ನೆರೆ, ಬರ, ಭಾಷಾ ವಿಚಾರ ಮುಂತಾದ ಪ್ರತೀ ವಿಚಾರಗಳಿಗೂ ನಿಯೋಗ ಕೊಂಡೊಯ್ದಿದ್ದಾರೆ. ಇಂತಹ ನಡೆಯನ್ನು ಯಾವ ರಾಜ್ಯದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿಗಳ ನಿಯೋಗ ಗೀಳಿನಿಂದಾಗಿ ರಾಜ್ಯದ ಸಮಸ್ಯೆಗಳು ಪರಿಹಾರವಾಗದು. ವಾಸ್ತವದಲ್ಲಿ ಈಗ ಯಾವುದೇ ಸಮಸ್ಯೆಗಳಿಲ್ಲ. ಅನುದಾನದ ಕೊರತೆಯೂ ಇಲ್ಲ. ಹಾಗಿದ್ದಲ್ಲಿ ಅದನ್ನು ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ನಿಯೋಗದ ಅಗತ್ಯವಿತ್ತು. ಹಾಗಿದ್ದೂ ಇದೀಗ ಸಿಎಂ ಕೈಗೊಂಡಿರುವ ದೆಹಲಿ ನಿಯೋಗದ ಹಿಂದಿರುವ ಮರ್ಮವೇನು ಎಂದು ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿ ಕರೆದಿದ್ದ ಜೆಡಿಎಸ್ ವಕ್ತಾರ ವೈ.ಎಸ್. ದತ್ತ, ತಾವು ನಿಯೋಗದೊಂದಿಗೆ ಬರುವುದಿಲ್ಲ ಎಂದು ಪ್ರಕಟಿಸಿದ್ದರು. ಹೀಗಾಗಿ ಮಂಗಳವಾರ ಮುಖ್ಯಮಂತ್ರಿಯವರು ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲದ ನಿಯೋಗದೊಂದಿಗೆ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ