ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಪ್ರವಾಹಕ್ಕೆ 18,600 ಕೋಟಿ ರೂ. ತರ್ಪಣ (Flood | Karnataka | Yediyurappa | CM)
Feedback Print Bookmark and Share
 
ರಾಜ್ಯದಲ್ಲುಂಟಾದ ಭಾರೀ ನೆರೆಯಿಂದಾಗಿ ಬರೋಬ್ಬರಿ 18,568 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನವದೆಹಲಿಗೆ ತೆರಳಿರುವ ಸಂಪುಟ ಸಹೋದ್ಯೋಗಿಗಳನ್ನೊಳಗೊಂಡ ನಿಯೋಗವು ಈ ಸಂಬಂಧ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರಕಾರವನ್ನು ವಿನಂತಿ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರೀ ನೆರೆಯಿಂದಾಗಿ 18,568.40 ಕೋಟಿ ರೂಪಾಯಿಗಳ ನಷ್ಟ ರಾಜ್ಯಕ್ಕಾಗಿದೆ. ಸಿಆರ್ಎಫ್ ನಿಯಮಾವಳಿಗಳ ಪ್ರಕಾರ 6,665.36 ಕೋಟಿ ರೂ.ಗಳನ್ನು ನೀಡಬೇಕೆಂದು ರಾಜ್ಯವು ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ.

ಆಗಾಗ ಪ್ರವಾಹಕ್ಕೆ ತುತ್ತಾಗುವ 224 ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕಿದ್ದು, ಒಟ್ಟಾರೆ ಒಂದು ಲಕ್ಷ ಮನೆ ನಿರ್ಮಾಣದ ಅಗತ್ಯವಿದೆ. 25 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಇವೆಲ್ಲಕ್ಕೂ ಕೇಂದ್ರ ಸರಕಾರದ ಹೆಚ್ಚಿನ ಸಹಕಾರದ ಅಗತ್ಯವಿದ್ದು, ಸಿಆರ್ಎಫ್ ನಿಯಮಾವಳಿಗಳನ್ನು ಸಡಿಲಗೊಳಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದೂ ಕೇಂದ್ರಕ್ಕೆ ಸಲ್ಲಿಸಲಿರುವ ಮನವಿಯಲ್ಲಿ ತಿಳಿಸಲಾಗಿದೆ.

ಪ್ರವಾಹದಿಂದಾದ ಹಾನಿ..
ಅತಿವೃಷ್ಟಿಯ ಕಾರಣ 18,568.40 ಕೋಟಿ ರೂಪಾಯಿಗಳ ನಷ್ಟವುಂಟಾಗಿದೆ. ಈ ಸಂದರ್ಭದಲ್ಲಿ 230 ಪ್ರಾಣ ಹಾನಿಯಾಗಿದ್ದು, ಸುಮಾರು 8,000 ಜಾನುವಾರುಗಳು ಸಾವನ್ನಪ್ಪಿವೆ. 50,000ಕ್ಕೂ ಹೆಚ್ಚು ಮನೆಗಳು, 4,000ಕ್ಕೂ ಹೆಚ್ಚು ಗ್ರಾಮಗಳು ತೊಂದರೆಗೊಳಗಾಗಿವೆ.

ಸಾಲ ಮನ್ನಾ ಮಾಡಿ..
ನೆರೆ ಪೀಡಿತ ಜಿಲ್ಲೆಗಳ ಏಳು ಲಕ್ಷ ರೈತರು ಸಹಕಾರಿ ವಲಯದಿಂದಲೇ ಸುಮಾರು 800 ಕೋಟಿ ರೂಪಾಯಿಗಳ ಸಾಲ ಪಡೆದಿದ್ದಾರೆ. ವಾಣಿಜ್ಯ ಬ್ಯಾಂಕ್‌ಗಳಿಂದ 1,700 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಇದನ್ನು ಮನ್ನಾ ಮಾಡಬೇಕು ಮತ್ತು ನೂತನ ಬೆಳೆ ಸಾಲ ನೀಡಬೇಕು ಎಂದು ಕೇಂದ್ರವನ್ನು ಕೋರಲಾಗುತ್ತದೆ.

1,000 ಕೋಟಿ ತಕ್ಷಣ ನೀಡಿ..
ಪ್ರಧಾನಿ ಮನಮೋಹನ್ ಸಿಂಗ್ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ನಂತರ 1,000 ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದರು. ಅದಿನ್ನೂ ಕೈ ಸೇರಿಲ್ಲ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದೂ ನಿಯೋಗ ಮನವಿ ಮಾಡಲಿದೆ.

ಅಲ್ಲದೆ ಇದರ ಜತೆ 2,000 ಕೋಟಿ ರೂಪಾಯಿಗಳನ್ನು ನೀಡಬೇಕು. ನೆರೆ ಅಥವಾ ಈ ರೀತಿಯ ಸಂಕಷ್ಟ ಪರಿಸ್ಥಿತಿ ಎದುರಾದಾಗ ಗ್ರಾಮಗಳ ಸ್ಥಳಾಂತರಕ್ಕೆ 2,000 ಕೋಟಿ ರೂಪಾಯಿ ನೀಡಬೇಕು. ಪ್ರಕೃತಿ ವಿಕೋಪ ನಿಧಿಯಿಂದ ಕೇಂದ್ರ ನೀಡುವ ಪರಿಹಾರವನ್ನು ಹೆಚ್ಚು ಮಾಡುವ ಮೂಲಕ ಬೆಳೆ ಹಾನಿ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಬೇಕು ಎಂದೂ ಸಿಎಂ ನಿಯೋಗ ಕೇಂದ್ರವನ್ನು ಆಗ್ರಹಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ