'ರಾಜ್ಯ ಬಿಜೆಪಿಯ ಒಳಜಗಳದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅದರ ಲಾಭ ಪಡೆಯಲು ಕೂಡ ಇಚ್ಛಿಸುವುದಿಲ್ಲ. ಬದಲಿಗೆ ಕಾದು ನೋಡುವ ತಂತ್ರ ಅನುಸರಿಸುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತಿಳಿಸಿದರು.
ಗುರುವಾರ ತಾಲೂಕಿನ ಕುಬಟೂರಿನಲ್ಲಿ ತಮ್ಮ ನವೀಕೃತ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಇಮೇಜ್ ಕಳೆದುಕೊಂಡಿದೆ. ಒಳಜಗಳ ಪಕ್ಷದ ದುರ್ಬಲತೆ. 'ಆಪರೇಶನ್ ಕಮಲ'ದ ಪರಿಣಾಮವನ್ನು ಈಗ ಎದುರಿಸುತ್ತಿದೆ ಎಂದ ಅವರು, ಪ್ರಸ್ತುತ ಬಳ್ಳಾರಿಯ ಗಣಿ ಧಣಿಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವಿನ ಗುಂಪುಗಾರಿಕೆ ಕೊನೆಯ ಕ್ಷಣದಲ್ಲಿ ಯಾವುದೇ ತಿರುವು ಪಡೆಯುವ ಸಾಧ್ಯವಿದೆ. ಸರ್ಕಾರಕ್ಕೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದರು.