ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಬಂಡಾಯದ ಲಾಭ ಪಡೆಯಲು ಕಾಂಗ್ರೆಸ್ ತಂತ್ರ? (BJP | Congress | Yeddyurappa | JDS | Kumaraswamy)
Feedback Print Bookmark and Share
 
ರೆಡ್ಡಿ ಸಹೋದರರಿಂದ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಬಿಜೆಪಿಯ ಭಿನ್ನಮತೀಯ ಶಾಸಕರು ತಮಗೆ ಆಗಬಹುದಾದ ಲಾಭಗಳ ಕುರಿತು ತಂತ್ರಗಾರಿಕೆಯಲ್ಲಿದ್ದರೆ, ಇತ್ತ ಕಡೆ ಕಾಂಗ್ರೆಸ್ ಪಕ್ಷ ಸದ್ದಿಲ್ಲದೇ ಬೇರೆಯದೇ ಆದ ಲೆಕ್ಕಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಕರುಣಾಕರ ರೆಡ್ಡಿ, ಶ್ರೀರಾಮುಲು, ಜನಾರ್ದನ ರೆಡ್ಡಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ಅಸ್ನೋಟಿಕರ್, ಶಿವನಗೌಡ ನಾಯಕ್ ಸೇರಿದಂತೆ 15 ಜನರಿಂದ ರಾಜೀನಾಮೆ ಕೊಡಿಸಿ ಯಡಿಯೂರಪ್ಪನವರ ವಿರುದ್ಧ ಸೆಡ್ಡು ಹೊಡೆಯುವುದು ಗಣಿರೆಡ್ಡಿಗಳ ಯೋಜನೆಯಾಗಿದ್ದು, ಪರಿಣಾಮವಾಗಿ ಉಂಟಾಗುವ ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ಸರ್ಕಾರ ಉರುಳಬಹುದು. ಆದರೆ ಅವರ ಕೈಯನ್ನು ಹಿಡಿಯಲು ಕಾಂಗ್ರೆಸ್ ಪಕ್ಷವು ಯೋಜಿಸಿರುವುದು ಸದ್ಯದ ಚಾಣಕ್ಯ ತಂತ್ರ ಎಂದು ಅರ್ಥೈಸಲಾಗುತ್ತಿದೆ.

ಸದ್ಯ ಕಂಡುಬರುತ್ತಿರುವ ಕಿತ್ತಾಟ-ಮೇಲಾಟಗಳು ಅವರ ಪಕ್ಷದ ವಿಚಾರ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸಹ, ಇದು ಸರ್ಕಾರದ ನಡವಳಿಕೆಗಳಿಗೆ ಸಂಬಂಧಪಡದ ವಿಷಯವಾಗಿರದೆ ಆ ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ತಾವು ಈ ಕುರಿತು ಹೆಚ್ಚೇನೂ ಹೇಳುವಂತಿಲ್ಲ ಮತ್ತು ಹೇಳುವುದಿಲ್ಲ ಎಂದೇನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಎರಡೂ ಪಕ್ಷಗಳ ಆಶಯಗಳೇ ಬೇರೆಯಾಗಿವೆ. ಈಗ ಎದ್ದಿರುವ ಅಸಮಾಧಾನದ ಪರಿಸ್ಥಿತಿಯನ್ನು ಬಳಸಿಕೊಂಡು ಪರಸ್ಪರ ಮಾತುಕತೆಯನ್ನು ನಡೆಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ತೆರೆಮರೆಯಲ್ಲಿ ತಂತ್ರಗಳನ್ನು ಹೆಣೆಯಲಾಗುತ್ತಿದೆಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಚಾಣಕ್ಯ ತಂತ್ರ ಫಲಿಸುವುದೇ ಎಂಬುದನ್ನು ಕಾದುನೋಡಬೇಕಿದೆ.


ಸಂಬಂಧಿತ ಮಾಹಿತಿ ಹುಡುಕಿ