ಲವ್ ಜಿಹಾದ್‌ನಿಂದ 7,500 ಹುಡುಗಿಯರು ಮತಾಂತರ:ಶ್ರೀರಾಮಸೇನೆ
ಬೆಂಗಳೂರು, ಶುಕ್ರವಾರ, 30 ಅಕ್ಟೋಬರ್ 2009( 16:56 IST )
PTI
ಇತ್ತೀಚೆಗೆ ವಿವಾದ ಪಡೆದುಕೊಂಡಿರುವ ಲವ್ ಜಿಹಾದ್ ವಿರುದ್ಧ ಶ್ರೀರಾಮಸೇನೆ ಡಿ.1ರಿಂದ 'ಸಹೋದರಿ ರಕ್ಷಿಸಿ ದೇಶ ಉಳಿಸಿ' ಎಂಬ ಹೆಸರಿನಲ್ಲಿ ಅಖಿಲ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇತ್ತೀಚೆಗೆ ಲವ್ ಜಿಹಾದ್‌ನಿಂದಾಗಿ 7,500 ಹುಡುಗಿಯರು ಮತಾಂತರಗೊಂಡಿದ್ದು, 3ಸಾವಿರ ಯುವತಿಯರು ಹಿಂಸೆ ತಾಳಲಾರದೆ ವಾಪಸ್ಸು ಬಂದಿದ್ದಾರೆ.
ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲವ್ ಜಿಹಾದ್ ವಿರುದ್ಧ ಹಮ್ಮಿಕೊಂಡ ಅಭಿಯಾನ ಕಾರ್ಯಕ್ರಮದಲ್ಲಿ 5ಸಾವಿರ ಯುವಕರು, 1ಸಾವಿರ ಯುವತಿಯರನ್ನು ತರಬೇತಿಗೊಳಿಸುವ ಯೋಜನೆಯಿದ್ದು, ಮಠಾಧಿಪತಿಗಳಿಂದ ಯುವಕರಿಗೆ ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸುವುದಾಗಿ ಹೇಳಿದರು.
ಪ್ರೇಮಾಂಕುರ ಪ್ರೇರಣೆಯಾಗುವ ಸ್ಥಳಗಳಾದ ಕಾಲೇಜ್ ಕ್ಯಾಂಪಸ್, ಹಾಸ್ಟೆಲ್, ಕಾಲ್ ಸೆಂಟರ್, ಕಾಫಿ ಡೇ, ಬಸ್ ನಿಲ್ದಾಣ ಸೇರಿದಂತೆ ಇತ್ಯಾದಿ ಸ್ಥಳಗಳಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದರು.