ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಸಾರ್ಟ್ ರಾಜಕೀಯದಲ್ಲಿ ರೇಣುಕಾಚಾರ್ಯ ಕೇಂದ್ರಬಿಂದು! (Renukacharya | Resort | Janaradana Reddy | Congress)
Feedback Print Bookmark and Share
 
ಕರುಣಾಕರ ರೆಡ್ಡಿ ಮತ್ತು ಜನಾರ್ದನ ರೆಡ್ಡಿಯವರ ಭಿನ್ನಮತಕ್ಕೆ ಸಾಥ್ ನೀಡಿರುವ ವಿವಾದಿತ ಶಾಸಕ ಎಂ.ಪಿ.ರೇಣುಕಾಚಾರ್ಯ ರೆಸಾರ್ಟ್ ರಾಜಕೀಯದಲ್ಲಿ ಚುರುಕಾಗಿ ಗುರುತಿಸಿಕೊಳ್ಳುವ ಮೂಲಕ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಅವರ ನೇತೃತ್ವದಲ್ಲಿ ಗುರುತಿಸಿಕೊಂಡಿರುವ 10 ಶಾಸಕರನ್ನು ಗಣಿಧಣಿಗಳು ಹೈದರಾಬಾದ್‌ನಲ್ಲಿರುವ ರೆಸಾರ್ಟ್‌ವೊಂದಕ್ಕೆ ಕರೆಯಿಸಿಕೊಂಡು ಆತಿಥ್ಯವನ್ನು ನೀಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವ ಕುರಿತು ಬಂಡಾಯದ ಬಲೆಯನ್ನು ಅಲ್ಲಿ ಹೆಣೆಯಲಾಗುತ್ತಿದೆ ಎಂದು ಮೂಲವೊಂದು ತಿಳಿಸಿದೆ.

ಇದಕ್ಕೆ ಸಮನಾಂತರವಾಗಿ, ಜಗದೀಶ ಶೆಟ್ಟರನ್ನು ಬೆಂಬಲಿಸುತ್ತಿರುವ ಶಾಸಕರ ಗುಂಪೊಂದನ್ನು ಗೋವಾದ ರೆಸಾರ್ಟ್ ಒಂದಕ್ಕೆ ಕರೆದೊಯ್ಯಲಾಗಿದ್ದು ಸರ್ಕಾರ ಉರುಳಿಸುವುದಕ್ಕೆ ಬೇಕಾದ ಎಲ್ಲ ರೀತಿಯ ಷಡ್ಯಂತ್ರಗಳನ್ನೂ ಅಲ್ಲಿ ಹೆಣೆಯಲಾಗುತ್ತಿದೆ ಎನ್ನಲಾಗಿದೆ.

ಗ್ರಾಮಗಳ ಸ್ಥಳಾಂತರದಲ್ಲಿ ತೊಡಗಿಸಿಕೊಂಡಿರುವ ರೆಡ್ಡಿಯವರ ಪಡೆ ಈ ಎರಡೂ ರೆಸಾರ್ಟ್‌‌ಗಳಲ್ಲಿ ತಂಗಿರುವ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲರೂ ತಂತಮ್ಮ ನಿಲುವಿಗೆ ಅಂಟಿಕೊಂಡು ಪಕ್ಷದ ವರಿಷ್ಠರ ಮುಂದೆ ಅದನ್ನೇ ವ್ಯಕ್ತಪಡಿಸುವಂತೆ ಸೂಚಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ