ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪಗೆ 83 ಶಾಸಕರ ಬೆಂಬಲ: ಬಚ್ಚೇಗೌಡ (BJP | Yeddyurappa | Bahhe gowda | Sadananda gowda)
Feedback Print Bookmark and Share
 
NRB
ರೆಡ್ಡಿ ಸಹೋದರರು ಕೆಲವು ಶಾಸಕರಿಗೆ ಆಮಿಷ ಒಡ್ಡುವ ಮೂಲಕ ಬಿಕ್ಕಟ್ಟು ಸೃಷ್ಟಿಯಾಗಿರುವುದಾಗಿ ಆರೋಪಿಸಿರುವ ಸಚಿವ ಬಚ್ಚೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ 83 ಶಾಸಕರ ಬೆಂಬಲ ಇರುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದಲ್ಲಿ ಶನಿವಾರ ಕರೆದ ಆಪ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಶಾಸಕ ಸ್ಥಾನವನ್ನು ನಾನು ಮಾರಿಕೊಳ್ಳುವುದಿಲ್ಲ. ತಾನು ಮುಖ್ಯಮಂತ್ರಿಗಳಿಗೆ ನಿಷ್ಠನಾದ ವ್ಯಕ್ತಿ ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಇದೀಗ ನಂಬರ್ ಗೇಮ್ ಆರಂಭವಾಗಿದೆ. ಒಂದೆಡೆ ರೆಡ್ಡಿ ಬ್ರದರ್ಸ್ ಬಣ, ಮತ್ತೊಂದೆಡೆ ಸ್ಪೀಕರ್ ಶೆಟ್ಟರ್ ಬಣ ಹಾಗೂ ಮುಖ್ಯಮಂತ್ರಿ ಆಪ್ತರ ಬಣಗಳು ತಮ್ಮ ಬಲಾಬಲ ಹೇಳಿಕೊಳ್ಳುವುದರಲ್ಲಿ ತೊಡಗಿವೆ. ತಮಗೆ ಸುಮಾರು 60ಶಾಸಕರ ಬೆಂಬಲ ಇರುವುದಾಗಿ ಹೇಳಿರುವ ಶ್ರೀರಾಮುಲು ತಿಳಿಸಿದ್ದಾರೆ. ಅದಕ್ಕೆ ತಿರುಗೇಟು ಎಂಬಂತೆ ಮುಖ್ಯಮಂತ್ರಿಗಳಿಗೆ 83ಶಾಸಕರ ಬೆಂಬಲ ಇದೆ ಎಂದು ಘೋಷಿಸಲಾಗಿದೆ.

ರೆಡ್ಡಿ ಸಹೋದರರು ಕೆಲವು ಶಾಸಕರಿಗೆ ಆಮಿಷ ಒಡ್ಡಿ ರೆಸಾರ್ಟ್‌ಗಳಲ್ಲಿ ಕೂಡಿ ಹಾಕಿರುವುದಾಗಿ ಗಂಭೀರವಾಗಿ ದೂರಿದ ಬಚ್ಚೇಗೌಡರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಹೈಕಮಾಂಡ್ ಶೀಘ್ರವೇ ಬಗೆಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ