ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇನ್ನೂ ಹತ್ತು ವರ್ಷ ನಾನೇ ಸಿಎಂ: ಯಡಿಯೂರಪ್ಪ ವಿಶ್ವಾಸ (Yeddyurappa | Kukke subramanya | Jagadish shettar | Puttur | BJP | Reddy)
Feedback Print Bookmark and Share
 
NRB
'ಜೀವನ ಅಂದ್ರೆ ಸವಾಲ್, ಕಳೆದ 25-30ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಕಂಡಿದ್ದೇನೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೂ 10ವರ್ಷಗಳ ಕಾಲ ನಾನೇ ಸಿಎಂ ಎಂದು ದೃಢವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ತುಲಾಭಾರ, ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರುಣಾಕರ ರೆಡ್ಡಿ ಮತ್ತು ಯಡಿಯೂರಪ್ಪ ಸರ್ಕಾರದ ಒಂದು ಭಾಗವಾಗಿದ್ದಾರೆ. ಹಾಗಾಗಿ ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಅಲ್ಲದೆ, ತಮಗೆ 83ಶಾಸಕರ ಬೆಂಬಲ ಇದೆ ಎಂದು ಸಚಿವ ಬಚ್ಚೇಗೌಡರು ಬಿಡುಗಡೆ ಮಾಡಿರುವ ಪಟ್ಟಿಯ ಬಗ್ಗೆ ಪತ್ರಕರ್ತರು ಗಮನಸೆಳೆದಾಗ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಟ್ಟಿ ಬಿಡುಗಡೆ ಕುರಿತು ವಿವರ ಪಡೆದು ನಂತರ ವಿವರ ನೀಡುತ್ತೇನೆ ಎಂದರು.

ಜನರು ಮತ್ತು ದೇವರನ್ನು ನಂಬಿದ್ದೇನೆ, ಆ ನೆಲೆಯಲ್ಲಿ ನನ್ನ ಯಾವುದೇ ಅಧಿಕಾರಕ್ಕೂ ಚ್ಯುತಿ ಬರಲ್ಲ. ಯಾರು ಎಷ್ಟು ಆಟ ಆಡ್ತಾರೋ ಆಡಲಿ ಅವರಿಗೂ ಅದೇ ರೀತಿಯಲ್ಲಿ ತಿರುಗೇಟು ನೀಡುವುದಾಗಿಯೂ ಈ ಸಂದರ್ಭದಲ್ಲಿ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿರುವ ರೆಡ್ಡಿ ಸಹೋದರರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ