ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶೋಭಾ ಬಾಯ್ಮುಚ್ಚಿ ಕೂತ್ಕಂಡ್ರೆ ಒಳ್ಳೇದು: ಶಾಂತಾ (Shobha Karandlaje | Shantha | BJP | Bellary | Yeddyurappa | Karnataka politcs)
Feedback Print Bookmark and Share
 
'ನನ್ನಿಂದಾಗಿ ಸರ್ಕಾರ ಉರುಳುವ ಪರಿಸ್ಥಿತಿ ಉದ್ಭವಿಸಿಲ್ಲ, ಆ ನಿಟ್ಟಿನಲ್ಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಎಂದು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಜ್ಯ ರಾಜಕಾರಣದ ಬಿಕ್ಕಟ್ಟಿಗೆ ಶೋಭಾ ಕರಂದ್ಲಾಜೆಯೇ ಕಾರಣ ಎಂದು ರೆಡ್ಡಿ ಸಹೋದರಿ, ಸಂಸದೆ ಜೆ.ಶಾಂತಾ ತಿರುಗೇಟು ನೀಡಿದ್ದಾರೆ.

ಎಲ್ಲಾ ಇಲಾಖೆಗಳಲ್ಲೂ ಹಸ್ತಕ್ಷೇಪ ನಡೆಸುತ್ತಿರುವ ಶೋಭಾ ರಾಜೀನಾಮೆ ಕೊಟ್ಟರೇನೇ ರಾಜ್ಯಕ್ಕೆ ಒಳ್ಳೆಯದು, ಆ ನಿಟ್ಟಿನಲ್ಲಿ ಶೋಭಾ ಬಾಯಿ ಮುಚ್ಚಿ ಕೂತ್ಕಂಡ್ರೆ ತುಂಬಾ ಒಳ್ಳೆಯದು ಎಂದು ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಏಕೈಕ ಮಹಿಳಾ ಸಂಸದೆ ಶಾಂತಾ,ಬಿಕ್ಕಟ್ಟಿಗೆ ಈಯಮ್ಮನೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ, ಶೋಭಾ ರಾಜ್ಯದ ಎರಡನೇ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿರುವುದಾಗಿ ಕಿಡಿಕಾರಿದರು.

ನೆರೆ ಪರಿಹಾರ ಕಾರ್ಯದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲಿ, ಸಂಸದರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಎಲ್ಲ ತಾನು ಹೇಳಿದಂತೆ ನಡೆಯಬೇಕೆಂಬ ಅಹಂಕಾರ ಶೋಭಾ ಅವರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ