ಅಭಿವೃದ್ಧಿಯತ್ತ ಗಮನಹರಿಸಿ, ಇಲ್ಲ ತೊಲಗಿ: ಸರ್ಕಾರಕ್ಕೆ ಸಿದ್ದು
ಬೆಂಗಳೂರು, ಭಾನುವಾರ, 1 ನವೆಂಬರ್ 2009( 11:53 IST )
ರಾಜ್ಯ ಸರ್ಕಾರದಲ್ಲಿ ಬುಗಿಲೆದ್ದ ಬಿಕ್ಕಟ್ಟು ಇನ್ನೆರಡು ದಿನಗಳಲ್ಲಿ ಅಂತ್ಯವಾಗದಿದ್ದರೆ ರಾಜ್ಯಪಾಲರನ್ನು ಭೇಟಿ ಮಾಡುವುದು ಖಂಡಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಕೆ.ಪಿ.ಸಿ.ಸಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ 25ನೇ ಪುಣ್ಯತಿಥಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪಕ್ಷದ ಬಿಕ್ಕಟ್ಟಿಗೆ ಸಂವಿಧಾನಾತ್ಮಕ ಸೇವೆಗಳನ್ನು ಬಲಿ ಕೂಡಲಾಗದು.ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾದಲ್ಲಿ ಪ್ರತಿಪಕ್ಷಗಳು ಸಹಿಸಲಾರವು ವ್ಯಕ್ತಿಗತ ಪ್ರತಿಷ್ಠೆಗಳನ್ನು ಬದಿಗೂತ್ತಿ ನೆರೆ ಸಂತ್ರಸ್ತರ ಅಭಿವೃದ್ದಿಯತ್ತ ಗಮನ ಹರಿಸಬೇಕು. ಇಲ್ಲವಾದರೆ, ಅಧಿಕಾರ ಬಿಟ್ಟು ತೂಲಗಬೇಕು ಎಂದವರು ಹೇಳಿದರು.
ಪರಸ್ಪರ ಕೆಸರೆರೆಚಿಕೂಳ್ಳುತ್ತಿರುವ ಇಂತಹ ಸರ್ಕಾರ ರಾಜ್ಯದಲ್ಲಿ ಇರಲು ಯೋಗ್ಯವಲ್ಲ ಎಂದ ಸಿದ್ದರಾಮಯ್ಯ, ಯಾವ ಮಂತ್ರಿಗಳು ಯಾರ ಗುಂಪಿಗೆ ಸೇರಬೇಕು ಎಂಬ ಚಿಂತೆಯಲ್ಲಿದ್ದಾರೆ ವಿನಹ ನೆರೆ ಪರಿಹಾರದಲ್ಲಿ ಯಾವ ಮಂತ್ರಿಯೂ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಹೊಣೆಗಾರಿಕೆ ತೋರಿಸುತ್ತಿಲ್ಲ ಎಂದು ಆರೋಪಿಸಿದರು.