ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿ ಸಚಿವರನ್ನು ವಜಾ ಮಾಡಿ: ಅನಂತಮೂರ್ತಿ (Bellary | UR Anantamurthy | Karnataka | BS Yediyurappa)
Feedback Print Bookmark and Share
 
ರಾಜ್ಯವನ್ನು ಕುಲಗೆಡಿಸಿರುವ ಬಳ್ಳಾರಿಯ ಸಚಿವರನ್ನು ವಜಾ ಮಾಡಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಗುಡುಗಿದ್ದಾರೆ.

ಉತ್ತರ ಕರ್ನಾಟಕ ನೆರೆಪೀಡಿತವಾಗಿರುವಾಗಲೂ ರಾಜಕೀಯ ಮಾಡುತ್ತಿರುವ ಧನದಾಹಿ ಸಚಿವರನ್ನು ಸರಕಾರದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಂಪುಟದಿಂದ ವಜಾ ಮಾಡಬೇಕೆಂದು ಅವರು ಆಗ್ರಹಿಸಿದರು.

ಅಂದು ಇದೇ ಗಣಿ ಧಣಿಗಳ ಹಣದಿಂದ ಶಾಸಕರನ್ನು ಖರೀದಿಸುವ ಮೂಲಕ ಯಡಿಯೂರಪ್ಪ ತಪ್ಪು ಮಾಡಿದ್ದರು. ಆದರೆ ಈಗ ಅವರಿಗೆ ವಾಸ್ತವ ಸ್ಥಿತಿ ಅರ್ಥವಾಗಿದೆ. ಅವರಿಗೆ ನನ್ನ ನೈತಿಕ ಬೆಂಬಲವಿದೆ ಎಂದು ಅನಂತಮೂರ್ತಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಕೀಳುಮಟ್ಟದ ರಾಜಕಾರಣ ಮಾಡುವ ಬಳ್ಳಾರಿಯ ಗಣಿ ಧಣಿಗಳು ಅದಿರನ್ನು ಕೊಳ್ಳೆ ಹೊಡೆದುದಲ್ಲದೆ, ರಾಜ್ಯವನ್ನೇ ಮಲಿನಗೊಳಿಸಿದ್ದಾರೆ. ಬಳ್ಳಾರಿ ಗಣಿಗಾರಿಕೆಯನ್ನು ತಕ್ಷಣವೇ ನಿಷೇಧಿಸುವ ಸಂಬಂಧ ಮುಖ್ಯಮಂತ್ರಿಗಳು ಕಾರ್ಯೋನ್ಮುಖರಾಗಲಿ ಎಂದೂ ಅವರು ಒತ್ತಾಯಿಸಿದ್ದಾರೆ.

ಮಾತಿನುದ್ದಕ್ಕೂ ಅವರು ಸರಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಳ್ಳಾರಿಯ ಸಚಿವರುಗಳ ವಿರುದ್ಧ ಹರಿಹಾಯ್ದರು. ನೈತಿಕತೆಯನ್ನೇ ಕಳೆದುಕೊಂಡಿರುವ ಸಚಿವರುಗಳಾದ ರೆಡ್ಡಿಗಳನ್ನು ಸರಕಾರದಲ್ಲಿ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅನಂತಮೂರ್ತಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ