ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಭಿನ್ನಮತದ ಲಾಭ ನಮಗೆ ಅಗತ್ಯವಿಲ್ಲ: ಖರ್ಗೆ (Karnataka | BS Yediyurappa | Mallikarjuna Kharge | Congress)
Feedback Print Bookmark and Share
 
ಆಡಳಿತ ಪಕ್ಷ ಬಿಜೆಪಿಯೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಕಾಂಗ್ರೆಸ್ ಯಾವುದೇ ಕಾರಣಕ್ಕೂ ತನ್ನ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಬಿಜೆಪಿಯ ಆಂತರಿಕ ಕಲಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಕಾದು ನೋಡುವ ತಂತ್ರ ನಮ್ಮದು. ಭಿನ್ನಮತದ ಲಾಭ ಪಡೆಯುವ ಯಾವುದೇ ಆಕಾಂಕ್ಷೆ ಕಾಂಗ್ರೆಸ್‌ಗಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಎದುರಾಗುವ ಅಪಾಯಗಳ ಕುರಿತು ನಾವು ರಾಜ್ಯದ ಜನತೆಯನ್ನು ಎಚ್ಚರಿಸಿದ್ದೆವು. ಆದರೆ ಯಾರೂ ನಮ್ಮ ಮಾತನ್ನು ಕೇಳಲಿಲ್ಲ. ಬಿಜೆಪಿಯವರಿಗೆ ಆಡಳಿತ ನಡೆಸಿ ಗೊತ್ತಿಲ್ಲ. ಮಾಧ್ಯಮಗಳು ಕೂಡ ನಮ್ಮನ್ನೇ ಖಳನಾಯಕರಂತೆ ಬಿಂಬಿಸಿದವು ಎಂದು ಹಳೆ ದಿನಗಳನ್ನು ಇದೇ ಸಂದರ್ಭದಲ್ಲಿ ಖರ್ಗೆ ನೆನಪಿಸಿದ್ದಾರೆ.

ಪಕ್ಷದೊಳಗಿನ ಜಗಳದಿಂದಾಗಿ ನೆರೆ ಪೀಡಿತರ ಪರಿಸ್ಥಿತಿ ಕಂಗೆಟ್ಟು ಹೋಗಿದೆ. ಅವರನ್ನು ಕೇಳುವವರೇ ಇಲ್ಲ. ಮಂತ್ರಿಗಳು, ಶಾಸಕರು ರೆಸಾರ್ಟ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಪರಿಹಾರ ವಿತರಣೆಗೆ ಸಾಕಷ್ಟು ಧನ ಸಹಾಯ ಸಿಕ್ಕಿದ್ದರೂ ಹಂಚುವುದನ್ನು ಬಿಟ್ಟು ಅಧಿಕಾರಕ್ಕಾಗಿ ಕಸರತ್ತು ಬಿಜೆಪಿಯಲ್ಲಿ ನಡೆಯುತ್ತಿದೆ. ಇದೇನಾ ಬಿಜೆಪಿ ಆಡಳಿತ ಎಂದು ರಾಜ್ಯ ಸರಕಾರವನ್ನು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಜನ ಸೇವೆಯ ಮೂಲಕ ಗುರುತಿಸಿಕೊಂಡ ಪಕ್ಷ. ಅದಕ್ಕೆ ಆಡಳಿತ ನಡೆಸಿ ಗೊತ್ತು. ಬಿಜೆಪಿ ಗೊತ್ತು ಗುರಿಯಿಲ್ಲದೆ ಸಾಗುತ್ತಿದೆ. ಅವರಿಗೆ ಅನುಭವ ಕಡಿಮೆ ಎಂದು ಖರ್ಗೆ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ