ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನ್ನಡ ಧ್ವಜಕ್ಕೆ ಎಂಇಎಸ್ ಪುಂಡರಿಂದ ಬೆಂಕಿ (Karnataka | BJP | MES | Belagavi | Yeddyurappa)
Feedback Print Bookmark and Share
 
ಕರ್ನಾಟಕದಲ್ಲಿದ್ದುಕೊಂಡೇ ಪುಂಡಾಟ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ರಾಜ್ಯೋತ್ಸವ ದಿನ ತನ್ನ ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸಿದೆ.

ನಗರದ ಹೊರವಲಯದ ಮಣ್ಣೂರಿನಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ, ಬೆಳಗಾವಿ ನಗರದ ಕಟ್ಟಡವೊಂದರಲ್ಲಿ ಹಾಕಲಾಗಿದ್ದ ಕನ್ನಡ ಧ್ವಜ ಕಿತ್ತು ಹಾಕಲು ವಿಫಲ ಯತ್ನ ನಡೆಸಿದರು.

ರಾಜ್ಯೋತ್ಸವ ನಿಮಿತ್ತ ಸಾರಿಗೆ ಸಂಸ್ಥೆಯೊಂದರ ಬಸ್‌ನಲ್ಲಿದ್ದ ಕನ್ನಡ ಬಾವುಟ ಇದ್ದ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಬಸ್‌ನಲ್ಲಿ ಬರೆಯಲಾಗಿದ್ದ ಕನ್ನಡ ಘೋಷಣೆಗಳನ್ನು ಅಳಿಸಿ, ಜೈ ಮಹಾರಾಷ್ಟ್ರ ಘೋಷಣೆ ಬರೆದರು. ವಾಹನದಲ್ಲಿ ಧ್ವಜ ಕಿತ್ತು ಭಗವಾಧ್ವಜ ಹಾರಿಸಿದರು. ಇದನ್ನು ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ವಿದ್ಯಾರ್ಥಿಗಳು ಪುನಃ ಅದೇ ಬಸ್‌ನಲ್ಲಿ ಮಣ್ಣೂರು ಗ್ರಾಮ ಪ್ರವೇಶಿಸುವ ವೇಳೆ, ಭಗವಾಧ್ವಜ ಕಿತ್ತು ಕನ್ನಡ ಧ್ವಜ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಪುಂಡರು, ಬಸ್ ತಡೆದು ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಕನ್ನಡ ಧ್ವಜ ತುಳಿದು ಅದಕ್ಕೆ ಬೆಂಕಿ ಇಟ್ಟರು.

ಇದು ಹೀಗಾದರೆ, ಕರಾಳ ದಿನಕ್ಕೆ ಕರೆ ನೀಡಿದ್ದ ಸಂಘಟನೆಯ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಕಾರವಾರದಲ್ಲಿ ಸಂಘಟನೆ ಮಹಾರಾಷ್ಟ್ರದ ಪರ ಘೋಷಣೆ ಕೂಗಿದವು.
ಸಂಬಂಧಿತ ಮಾಹಿತಿ ಹುಡುಕಿ