ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಡೆದ್ದ ಸಚಿವರನ್ನು ಸಿಎಂ ವಜಾ ಮಾಡಲಿ: ನಾಣಯ್ಯ (Yeddyurappa | BJP | Congress | Nanayya | Madikeri)
Feedback Print Bookmark and Share
 
ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನವಾಗದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂಡೆದ್ದ ಸಚಿವರನ್ನು ಸಂಪುಟವನ್ನು ವಜಾ ಮಾಡಲಿ ಎಂದು ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಗುಡುಗಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ದ ಬಂಡಾಯ ಎದ್ದ ಸಚಿವರನ್ನು ಸಿ.ಎಂ ಸಂಪುಟದಿಂದ ವಜಾ ಮಾಡಬೇಕು, ಇಲ್ಲವೇ ಯಡಿಯೂರಪ್ಪ ಸರ್ಕಾರವನ್ನು ವಿಸರ್ಜನೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಸಚಿವರನ್ನು ಸಂಪುಟದಿಂದ ತೆಗೆಯಲು ಆಗದೆ ಹೋದರೆ ನೇರವಾಗಿ ರಾಜ್ಯಪಾಲರ ಬಳಿ ಹೋಗಲಿ ಎಂದು ಯಡಿಯೂರಪ್ಪ ವಿರುದ್ದ ಖಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಸರ್ಕಾರದ. ಈ ಬಿಕ್ಕಟ್ಟಿಗೆ ಆಪರೇಷನ್ ಕಮಲವೇ ಮೂಲ ಕಾರಣ ಸರ್ಕಾರದ ವಿರುದ್ದ ಕಿಡಿ ಕಾರಿದರು. ಬಿ.ಜೆ.ಪಿ ಮಂದಿ ಕಿತ್ತಾಟಕ್ಕಿಳಿದು ಸ್ವತ: ತಾವೇ ಅವಮಾನ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ