ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚಾಮರಾಜನಗರ ಡಿಸಿ,ಎಸ್ಪಿ ವರ್ಗಾವಣೆ: ಸಿಎಂ (Chamaraja nagar | BJP | Yeddyurappa | Congress | JDS)
Bookmark and Share Feedback Print
 
ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಅಲ್ಲದೇ, ರೈತರು ತಮ್ಮ ಬೇಡಿಕೆಗಳ ಸಂಬಂಧ ಚಳವಳಿ ನಡೆಸಿದ ಸಂದರ್ಭದಲ್ಲಿ ಅವರ ಮೇಲೆ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು. ರೈತರ ಚಳವಳಿ ಸಂದರ್ಭದಲ್ಲಿ ರೈಲ್ವೆ ಇಲಾಖೆಯವರು ದಾಖಲಿಸಿರುವ ಎಲ್ಲಾ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಹಾವು ಕಡಿತ, ನೀರಿನಲ್ಲಿ ಮುಳುಗಡೆ ಅಂತಹ ಪ್ರಕರಣಗಳಲ್ಲಿ ಸಾವಿಗೀಡಾಗುವ ರೈತರ ಹಾಗೂ ಬಡ ಕುಟುಂಬಗಳಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲು ಒಂದು ನೀತಿಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

ತೆಂಗು ಸಂಶೋಧನೆ ಮತ್ತು ಮಾರುಕಟ್ಟೆಯನ್ನು ಬಲಪಡಿಸುವ ಸಲುವಾಗಿ ನೀರಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಕಟಿಸುವುದಾಗಿ ಹೇಳಿದ ಅವರು, ಇದರಿಂದ ತೆಂಗು ಮತ್ತು ತೆಂಗಿನ ಉತ್ಪಾದನೆಯ ಮೌಲ್ಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರು.

ಡಿಸಿ, ಎಸ್ಪಿ ವರ್ಗಾವಣೆ ಆದೇಶ: ರೈತರ ಕೊನೆಗೂ ಮಣಿದಿರುವ ಮುಖ್ಯಮಂತ್ರಿಗಳು ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಗುರುವಾರ ಸಂಜೆಯೇ ವರ್ಗಾವಣೆ ಮಾಡಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಅವರಿಗೆ ಯಾವ ಸ್ಥಳ ಎಂಬುದನ್ನು ನಿಗದಿಪಡಿಸದೆಯೇ ವರ್ಗಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ