ನಾನು ಅಧಿಕಾರದಲ್ಲಿ ಇರುವವರೆಗೆ ಯಾರೊಬ್ಬರಿಗೂ ನಮ್ಮ ರೈತರ ಮೈ ಮುಟ್ಟಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ ವೇಳೆ ಈ ಹೇಳಿಕೆಯನ್ನು ಅವರು ನೀಡಿದರು. ಅಧಿಕಾರಿಗಳಿಂದ ರೈತರಿಗೆ ಇನ್ನು ಮುಂದೆ ಯಾವುದೇ ರೀತಿಯ ದೈಹಿಕ ಹಿಂಸೆ ಆಗುವುದಿಲ್ಲ. ಮಾತ್ರವಲ್ಲ, ರೈತರ ವಿರುದ್ಧ ಇನ್ನು ಮುಂದೆ ಯಾವ ಹೊಸ ಮೊಕದ್ದಮೆಗಳೂ ದಾಖಲಾಗುವುದಿಲ್ಲ ಎಂದು ಅಭಯ ನೀಡಿದರು.
ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸರಕಾರ ಬದ್ಧ. ರೈತರ ಮೇಲೆ ದೌರ್ಜನ್ಯ ಎಸಗಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.