ಅಭಿವೃದ್ಧಿ ಹೆಸರಲ್ಲಿ ಸರ್ಕಾರ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾ, ಅವರಿಗೆ ನಿಗದಿತ ಬೆಲೆ ನೀಡದೆ ರೈತರಿಗೆ ವಂಚಿಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಸ್ವಾಧೀನಪಡಿಸಿಕೊಳ್ಳುವ ರೈತರ ಜಮೀನಿಗೆ ಕನಿಷ್ಠ ಬೆಲೆ ನೀಡಿ ಸರ್ಕಾರ ಅನ್ಯಾಯ ಮಾಡಿದೆ. ರೈತರ ಮನವಿ ಧಿಕ್ಕರಿಸಿ ಬಲಾತ್ಕಾರವಾಗಿ ಜಮೀನು ವಶಪಡಿಸಿಕೊಳ್ಳುತ್ತಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ರೈತರಿಗೆ ವಂಚಿಸುತ್ತಾ ಬಂದಿದ್ದಾರೆ. ಈ ಕೂಡಲೇ ರೈತರ ವಿರುದ್ಧ ಕೈಗೆತ್ತಿಕೊಂಡಿರುವ ಜಮೀನು ವಶಪಡಿಕೆಯನ್ನು ಕೈ ಬಡಬೇಕು ಎಂದು ಸಿದ್ದು ಹೇಳಿದರು. ಶಾಸಕ ಕೃಷ್ಣೇ ಭೈರೇಗೌಡ, ಮೇಲ್ಮನೆ ಪ್ರತಿಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.