ನೈಸ್ ಭೂ ವಿವಾದ ಕುರಿತಂತೆ ವಾಗ್ದಾಳಿ ನಡುವೆಯೇ ತಣ್ಣಗೆ ಪ್ರತಿಕ್ರಿಯೆ ನೀಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೌಡರು ನನಗೆ ಮಾತ್ರ ಅವಮಾನ ಮಾಡಿಲ್ಲ, ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾರೆ ಎಂದಿರುವ ಅವರು ತಮ್ಮನ್ನು ಕೆರಳಿಸುವುದನ್ನು ಗೌಡರು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಪ್ರಧಾನಿ ಗೌಡರು ಬಳಸಿದ ಭಾಷೆ ರಾಜಕೀಯ ಹಾಗೂ ಸಾರ್ವತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏತನ್ಮಧ್ಯೆ ಗೌಡರು ಇಂತಹ ಕೀಳುಮಟ್ಟದ ಭಾಷೆ ಉಪಯೋಗಿಸುವ ಮೂಲಕ ರಾಜ್ಯದ ಆರು ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಬಳಸಿದಂತಹ ಪದಗಳನ್ನು ನಾನು ಬಳಸಲಾರೆ, ಅವರ ಬೈಗುಳದಿಂದ ಅವರ ಘನತೆಗೆ ಕಪ್ಪು ಚುಕ್ಕೆ ತಂದುಕೊಂಡಿದ್ದಾರೆ. ಆದರೆ ನನ್ನನ್ನು ಕೆರಳಿಸುವುದನ್ನು ಮೊದಲು ಅವರು ನಿಲ್ಲಿಸಬೇಕು ಎಂದು ಎಚ್ಚರಿಸಿದರು.