ನಿಗದಿತ ಅವಧಿ ಪೂರ್ಣಗೊಂಡ ನಂತರ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದು ಅಥವಾ ಪಡೆಯುವುದು ನಿಯಮಬಾಹಿರ ಎಂದು ಹೈಕೋರ್ಟ್ ಸೋಮವಾರ ತಿಳಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾಯಂ ನೌಕರರಾಗಿದ್ದ ಬಿ.ಕೆ.ಹುಚ್ಚಯ್ಯ ಎನ್ನುವವರ ಪತ್ನಿ ನಾಗರತ್ನ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಮೂರ್ತಿ ರಾಮಮೋಹನ ರೆಡ್ಡಿ ಈ ಆದೇಶ ನೀಡಿದ್ದಾರೆ.
ಬಿಡಿಎನಲ್ಲಿ ಹುಚ್ಚಯ್ಯ ಅವರು 1978ರಿಂದ ಮಾಲಿಯಾಗಿ ಕೆಲಸ ಮಾಡುತ್ತಿದ್ದರು. 1996ರಲ್ಲಿ ಅವರು ಸಾವನ್ನಪ್ಪಿದ್ದರು. ನಂತರ ಅವರ ಕೆಲಸವನ್ನು ತನಗೆ ನೀಡುವಂತೆ ಅವರ ಪತ್ನಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಬಿಡಿಎ ಪರಿಗಣಿಸದ ಹಿನ್ನೆಲೆಯಲ್ಲಿ ನಾಗರತ್ನ ಹೈಕೋರ್ಟ್ ಮೊರೆ ಹೋಗಿದ್ದರು.
ನಾಗರತ್ನ ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅನುಕಂಪ ಆಧಾರಿತ ನೌಕರಿ ಕೇಳುವುದು ಸರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿದರು.