ಡಾ. ವೀರೇಂದ್ರ ಹೆಗ್ಗಡೆ, ದೇಜಗೌ 'ಕರ್ನಾಟಕ ರತ್ನ' ಪ್ರಶಸ್ತಿ
ಬೆಂಗಳೂರು, ಗುರುವಾರ, 14 ಜನವರಿ 2010( 10:43 IST )
Avinash
WD
ಕರ್ನಾಟಕ ರಾಜ್ಯ ಸರಕಾರವು ಕೊಡಮಾಡುವ ಅತ್ಯುನ್ನತ ಪುರಸ್ಕಾರವಾಗಿರುವ, 2009ರ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಘೋಷಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ, ಸ್ವಸಹಾಯ ಸಂಘ, ಗ್ರಾಮೀಣಾಭಿವೃದ್ಧಿ ಯೋಜನೆ, ಸಾಹಿತ್ಯ, ಸಂಸ್ಕೃತಿ ಪೋಷಣೆ ಮುಂತಾದ ಜನಹಿತ ಕಾರ್ಯಗಳಿಗಾಗಿ ಡಾ.ಹೆಗ್ಗಡೆಯವರಿಗೆ ಈ ಪ್ರಶಸ್ತಿ ಸಂದಿದೆ.
ಇದೇ ರೀತಿ, 2008 ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ದೇ.ಜವರೇ ಗೌಡ ಅವರಿಗೆ ನೀಡಲಾಗಿದೆ.
ನ್ಯಾ.ಡಾ.ವಿ.ಎಸ್.ಮಳೀಮಠ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಸರ್ಕಾರ ಈ ಪ್ರಶಸ್ತಿಗೆ ಹೆಗ್ಗಡೆ, ಹಾಗೂ ದೇಜಗೌ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಾ.ಎಸ್.ನಿಜಲಿಂಗಪ್ಪ, ಕವಿ, ಸಾಹಿತಿ ಕುವೆಂಪು, ಮೇರು ನಟ ಡಾ.ರಾಜಕುಮಾರ್, ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ಗಾಯಕ ಪಂಡಿತ್ ಭೀಮಸೇನ ಜೋಷಿ ಹಾಗೂ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನೀಡಲಾಗಿತ್ತು.