ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಆರೋಪ ಮತ್ತು ಪ್ರತ್ಯಾರೋಪ ವೇಳೆ ಬಳಸುತ್ತಿರುವ ಅವಾಚ್ಯ ಪದಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ, ಕೆಟ್ಟ ಪದ ಪ್ರಯೋಗ ಮಾಡಿರುವ ಎಲ್ಲರೂ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೈಸ್ ವಿವಾದದಲ್ಲಿ ರಾಜಕಾರಣಿಗಳು ಬಳಸುತ್ತಿರುವ ಪದಗಳಿಂದಾಗಿ ಎಲ್ಲರೂ ತಲೆತಗ್ಗಿಸುವಂತಾಗಿದೆ ಎಂದು ವಿಷಾದಿಸಿದರು.
ದೇವೇಗೌಡರು ಮುಖ್ಯಮಂತ್ರಿಗಳ ವಿರುದ್ಧ ಅವಾಚ್ಯ ಪದಗಳ ಬಳಕೆ ಮಾಡಿದ್ದು ಸರಿಯಲ್ಲ, ಯಡಿಯೂರಪ್ಪ, ನೈಸ್ ವಿರುದ್ಧ ಪ್ರತಿಭಟಿಸಿದ ರೈತರನ್ನು ಬಾಡಿಗೆ ರೈತರು ಎಂದದ್ದು ತಪ್ಪು, ಸಿದ್ದು ಈಡಿಯಟ್‌ಗಳ ಸರ್ಕಾರ ಎಂದದ್ದು ಕೂಡ ಸಮರ್ಥನೀಯವಲ್ಲ ಎಂದು ಪೂಜಾರಿ ಹೇಳಿದರು.