ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತ ಸಂಸ್ಥೆ ನಂಬಿ, ಇಲ್ಲ ಮುಚ್ಚಿ: ಹೆಗ್ಡೆ (Lokayukta | Santhosh hegde | Jain mahaveer college | Bribe | Crime)
Bookmark and Share Feedback Print
 
NRB
ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುತ್ತೇವೆ ಎಂದು ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ನಂಬಬೇಕು ಇಲ್ಲವೇ ಮುಚ್ಚಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭ್ರಷ್ಟರನ್ನು ಶಿಕ್ಷಿಸುವ ಅಧಿಕಾರ ತಮಗೆ ಬೇಡ, ಆರೋಪಿಗಳನ್ನು ಕೋರ್ಟ್ ಮೆಟ್ಟಿಲು ಹತ್ತಿಸಲು ಅಧಿಕಾರ ನೀಡಿ ಸಾಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಅಲ್ಲದೇ, ಸಮರ್ಪಕವಾಗಿ ಸಾಕ್ಷ್ಯ ಹಾಗೂ ಮಾಹಿತಿ ಸಿಕ್ಕಲ್ಲಿ ಸಚಿವರ ಮೇಲೂ ದಾಳಿ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ನಗರದ ಭಗವಾನ್ ಮಹಾವೀರ ಜೈನ್ ಕಾಲೇಜಿನ ಕನ್ನಡ ವೇದಿಕೆ ಏರ್ಪಡಿಸಿದ್ದ ಜಾಗೃತಿ ಹಬ್ಬ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲಿ ಹಿಡಿದು ಹುಲಿಗಳನ್ನು ಬಿಡುತ್ತಾರೆ ಎಂಬ ಆರೋಪ ತಾವು ಒಪ್ಪುವುದಿಲ್ಲ ಎಂದರು. ಈವರೆಗೆ ಅಧಿಕಾರಿಗಳು, ಎಂಜಿನಿಯರ್, ಶಾಸಕರ ಮೇಲೂ ದಾಳಿ ನಡೆಸಿದ್ದೇವೆ. ಅದೇ ರೀತಿಯಲ್ಲಿ ಅಧಿಕಾರ ಸಿಕ್ಕರೆ ಸಚಿವರ ಮೇಲೂ ದಾಳಿ ನಡೆಸುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಖಾಸಗಿ ಕಚೇರಿಗಳ ಮೇಲೆ ದಾಳಿ ನಡೆಸಲು ತಮಗೆ ಅಧಿಕಾರವಿಲ್ಲ. ಆದರೆ, ಸರ್ಕಾರಿ ಅಧಿಕಾರಿಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಖಾಸಗಿ ವ್ಯಕ್ತಿಗಳನ್ನು ಬಂಧಿಸಬಹುದು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ