ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಧರ್ಮಸಿಂಗ್ ಅವರ ಆಧಿಕಾರಾವಧಿಯಲ್ಲಿ ಅಭಿವೃದ್ದಿ ಯೋಜನೆಗಳ ಅಡಿಪಾಯಕ್ಕೆ ಬಿ.ಜೆ.ಪಿ ಸರ್ಕಾರ ಈಗ ಉದ್ಘಾಟನೆ ಮಾಡಿ ನಮ್ಮದೇ ಯೋಜನೆಗಳು ಎಂಬಂತೆ ಬಿಂಬಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.
ಶುಕ್ರವಾರ ಚಿತ್ರಕಲಾಪರಿಷತ್‌ನಲ್ಲಿ ಅಂತಾರಾಷ್ಟ್ರೀಯ ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಜನತೆಗೆ ಏನನ್ನೂ ಸರಿಯಾಗಿ ಕೊಟ್ಟಿಲ್ಲ. ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದಕ್ಕೂ ಸ್ಪಂದಿಸಿಲ್ಲ. ಚುನಾವಣೆ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸಿಲ್ಲ. ಒಂದು ವರ್ಷ ಹತ್ತು ತಿಂಗಳು ಮಲಗಿದ್ದವರು ಈಗ ರಾತ್ರೋ ರಾತ್ರಿ ವಹಿವಾಟು ನಡೆಸುತ್ತಿದ್ದಾರೆ ಎಂದು ದೂರಿದರು. ಈ ಬೆಳವಣಿಗೆಯಿಂದ ಅನಾವಶ್ಯಕ ಗೊಂದಲ ಸೃಷ್ಠಿಯಾಗುತ್ತಿದ್ದು, ಇದು ಸರಿಯಲ್ಲ. ಬಿಬಿಎಂಪಿ ಚುನಾವಣೆ ಪಾರದರ್ಶಕವಾಗಿಯೇ ನಡೆಯಬೇಕು ಎಂದರು.