ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೊಲ್ಲೂರು ರಥೋತ್ಸವ:ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು (Kollur | Udupi | Sree mookambika | Kerala)
Bookmark and Share Feedback Print
 
ಪ್ರಸಿದ್ಧ ಯಾತ್ರಾ ಸ್ಥಳವಾದ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಮಹಾರಥೋತ್ಸವದ ವೇಳೆ ನೂಕುನುಗ್ಗಲಿನಿಂದ ರಥದ ಚಕ್ರಕ್ಕೆ ಸಿಲುಕಿ ಕೇರಳದ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕೊಲ್ಲೂರು ಮೂಕಾಂಬಿಕಾ ರಥೋತ್ಸವಕ್ಕಾಗಿ ನೆರೆಯ ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ದೇಗುಲದ ರಥಬೀದಿ ಹಾಗೂ ಮಹಾದ್ವಾರದ ಬಳಿ ನೆರೆದಿದ್ದರು. ರಥೋತ್ಸವದ ವಿಧಿನಿಧಾನಗಳು ಮುಗಿದು ರಥ ಎಳೆಯಲು ಆರಂಭಿಸಿದ ಸಂದರ್ಭದಲ್ಲಿ ಅಶ್ವಥ ಮರವೊಂದರ ರೆಂಬೆಗಳಿಂದ ತಪ್ಪಿಸಲು ರಥವನ್ನು ಆಕಸ್ಮಿಕವಾಗಿ ತಿರುಗಿಸಿದಾಗ ಈ ದುರ್ಘಟನೆ ನಡೆದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಏಕಾಏಕಿ ರಥ ತಿರುಗಿದ್ದರಿಂದ ಗಾಬರಿಗೊಂಡ ಭಕ್ಕ ಸಮೂಹ ತಳ್ಳಾಟದಲ್ಲಿ ತೊಡಗಿದ್ದರಿಂದ ಕೇರಳ ಮೂಲದ ಭಕ್ತರೊಬ್ಬರ ಮೇಲೆ ರಥದ ಗಾಲಿಗಳು ಸಾಗಿ ಹೋಗಿದೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ಕೇರಳ ಕಲ್ಲಿಕೋಟೆಯ ಕೆ.ವಿ.ಬಾಬು ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ