ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ (Siddaramaiah | Karnataka | Congress | JDS | BJP)
Bookmark and Share Feedback Print
 
ತೀವ್ರ ಕೋಲಾಹಲ, ವಿರೋಧದ ನಡುವೆ ಮಂಗಳವಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಮೊದಲ ಜಯ ದೊರಕಿದ್ದರೆ, ಇತ್ತ ರಾಜ್ಯ ವಿಧಾನಸಭೆಯಲ್ಲಿ ಧರಣಿ, ಮಾತಿನ ಚಕಮಕಿ ನಡುವೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಮಸೂದೆ-2010ನ್ನು ಮಂಡಿಸಿದೆ.

ಇದೇ ಅಧಿವೇಶನದ ಅವಧಿಯಲ್ಲಿ ಹಿಂದಕ್ಕೆ ಪಡೆದಿದ್ದ ವಿಧೇಯಕವನ್ನು ಸರ್ಕಾರ ಮಂಡಿಸುವ ಮುನ್ಸೂಚನೆ ಅರಿತ ಕಾಂಗ್ರೆಸ್ ಮತ್ತು ಜೆಡಿಎಸ್ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸದನ ಕೋಲಾಹಲದ ಗೂಡಾಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಆದರೂ ಕೊನೆಗೆ ಗದ್ದಲದ ನಡುವೆಯೇ ವಿಧೇಯಕ ಮಂಡನೆಗೆ ಧ್ವನಿ ಮತದ ಮೂಲಕ ಅಂಗೀಕಾರ ದೊರೆಯಿತು. ಮಸೂದೆ ಮಂಡನೆಯನ್ನು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಕೈಗೆತ್ತಿಕೊಂಡಾಗಲೇ ಪ್ರತಿ ಪಕ್ಷ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿಧೇಯಕ ಅಂಗೀಕಾರದ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜನ ವಿರೋಧಿ, ಹಿಂದುಳಿದವರ ಆಹಾರ ಪದ್ಧತಿಗೆ ಧಕ್ಕೆಯಾಗಲಿದೆ. ಈ ಮಸೂದೆ ಹಿಂದೆ ಬಿಜೆಪಿಯ ರಹಸ್ಯ ಅಜೆಂಡಾ ಅಡಗಿದೆ ಎಂದು ದೂರಿದರು.

ಗೋ ಸಾಗಣೆಗೆ ಈ ಹಿಂದೆ ನಿಷೇಧ ಇರಲಿಲ್ಲ, ಅದಕ್ಕೂ ಪರಿಷ್ಕೃತ ಮಸೂದೆಯಲ್ಲಿ ನಿಷೇಧ ಹೇರಲಾಗಿದೆ. ಹಸು, ಕರು, ಎಮ್ಮೆ, ಕರು, ಎತ್ತು, ಹೋರಿ, ಕೋಣ ಇವುಗಳ ಹತ್ಯೆ ನಿಷೇಧಿಸುವುದಕ್ಕಾಗಿ ಮತ್ತು ಜಾನುವಾರು ತಳಿಗಳನ್ನು ಸಂರಕ್ಷಿಸುವುದಕ್ಕೆ ಈ ಮಸೂದೆ ಮಂಡಿಸಿರುವುದಾಗಿ ಸರ್ಕಾರ ಸಮಜಾಯಿಷಿ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ