ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ ಜಟಾಪಟಿ: ನೀನು ಸುಮ್ಮನೆ ಕೂತ್ಕೋ...! (Congress | JDS | BJP | veeranna Matthikatti | Bangalore)
Bookmark and Share Feedback Print
 
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ಸಭಾಪತಿ ವೀರಣ್ಣ ಮತ್ತಿಕಟ್ಟಿ ನಡುವೆ ಮಾತಿನ ಚಕಮಕಿ, ಏಕವಚನ ಪ್ರಯೋಗ, ಏರಿದ ದನಿಯಲ್ಲಿ ಜಟಾಪಟಿ ನಡೆದ ಪ್ರಸಂಗ ಬುಧವಾರ ಮೇಲ್ಮನೆಯಲ್ಲಿ ನಡೆಯಿತು.

ರಾಜ್ಯಪಾಲರ ವಂದನಾ ನಿರ್ಣಯದ ಭಾಷಣದ ಮೇಲೆ ಜೆಡಿಎಸ್ ನಾಯಕ ನಾಣಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಅಡ್ಡಿಪಡಿಸಲು ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದಾಗ ಎದ್ದುನಿಂತು ಮಾತನಾಡಿದ ಶ್ರೀಕಂಠೇಗೌಡರ ವಿರುದ್ಧ ಸಭಾಪತಿ ಮತ್ತಿಕಟ್ಟಿ ವಾಗ್ದಾಳಿ ನಡೆಸಿದರು.

ನಿನಗೆ ಅವಕಾಶ ಕೊಟ್ಟಿಲ್ಲ, ನೀನು ಸುಮ್ಮನೆ ಕುಂಡ್ರು...ಕಲಾಪ ಪ್ರಾರಂಭವಾದಾಗಿನಿಂದಲೂ ನೋಡುತ್ತಿದ್ದೇನೆ ನೀನು ಸುಮ್ಮನಿರು ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಶ್ರೀಕಂಠೇ ಗೌಡ ಕೂಡ ಮತ್ತಿಕಟ್ಟಿ ವಿರುದ್ಧ ಮಾತನಾಡಿ, ಏಕವಚನ ಪ್ರಯೋಗ ಮಾಡಬೇಡಿ, ಬಹುವಚನದಲ್ಲಿ ಮಾತನಾಡಿ ಎಂದು ಹೇಳಿದರು.

ನಂತರ ಸನ್ಮಾನ್ಯ ಶ್ರೀಕಂಠೇಗೌಡರೇ ದಯವಿಟ್ಟು ಸುಮ್ಮನಿರಿ. ಯಾರು ಮಾತನಾಡಬೇಕು, ಯಾರಿಗೆ ಅವಕಾಶ ಕೊಡಬೇಕು ಎಂಬುದನ್ನು ನಿಮ್ಮ ಪಕ್ಷದ ನಾಯಕರು ನಿರ್ಧರಿಸಿ ಅವರ ಹೆಸರನ್ನು ನನಗೆ ಕಳುಹಿಸಿರುತ್ತಾರೆ. ಅದರ ಪ್ರಕಾರ ನಾನು ಅವಕಾಶ ಕೊಡುತ್ತೇನೆ. ಇದು ಸದನ ನಡೆದು ಬಂದ ದಾರಿ. ಹೊಸ ಸದಸ್ಯರಿಗೆ ಕಲಾಪದಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡಬೇಕೆಂದು ಹಿರಿಯ ಸದಸ್ಯರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ