ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉದ್ಯಾನನಗರಿಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ (Bangalore | Rain | Vijaya Nagar | BBMP | Bescom)
Bookmark and Share Feedback Print
 
ಉದ್ಯಾನನಗರಿಯಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಲವಾರು ಮರ, ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಹಲವಡೆ ನಿನ್ನೆ ಸುರಿದ ಭಾರೀ ಮಳೆಗೆ ಮರಗಳು ಧರೆಗುರುಳಿದ್ದವು. ಮರ ಮತ್ತು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದ ಹಿನ್ನೆಲೆಯಲ್ಲಿ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಪರಿದಾಡಿದರೆ, ಮತ್ತೊಂದೆಡೆ ರಸ್ತೆಯಲ್ಲಿ ಮರಗಳು ಬಿದ್ದಿದ್ದರಿಂದ ಸಂಚಾರ ವ್ಯವಸ್ಥೆಗೆ ತೊಡಕುಂಟಾಗಿದೆ.

ಇದೀಗ ತಡವಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಉರುಳಿ ಬಿದ್ದಿರುವ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಿಬಿಎಂಪಿ ಮತ್ತು ಬೆಸ್ಕಾಂನ ನಿಧಾನಗತಿಯ ಕಾರ್ಯಪ್ರವೃತ್ತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರದಲ್ಲಿಯೇ 50 ಮರಗಳು ಧರೆಗೆ: ವರುಣನ ಆರ್ಭಟಕ್ಕೆ ವಿಜಯನಗರವೊಂದರಲ್ಲೇ ಸುಮಾರು 50ಮರಗಳು ಧರೆಗುರುಳಿದ್ದವು. ಅಲ್ಲದೇ ಗಾಯಿತ್ರಿನಗರ, ರಾಜಾಜಿನಗರ, ಗೋವಿಂದರಾಜನಗರ ಸೇರಿದಂತೆ ಹಲವಡೆ ಮರಗಳು ಉರುಳಿ ಬಿದ್ದಿದ್ದವು.

ಕೆಎಚ್‌ಬಿ ಕಾಲೋನಿಯ ಬಸ್ ನಿಲ್ದಾಣದ ಸಮೀಪ ಬಿಎಸ್‌ಎನ್ಎಲ್ ಪ್ರಸರಣ ಗೋಪುರ ಕುಸಿದು ಬಿದ್ದಿದೆ. ರೇಸ್ ಕೋರ್ಸ್ ಸಮೀಪ ಇರುವ ಮುಖ್ಯಮಂತ್ರಿ ನಿವಾಸಿ ಮುಂಭಾಗದಲ್ಲಿಯೂ ಮರವೊಂದು ಉರುಳಿ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗಿತ್ತು. ಹಂಪಿನಗರದ ಈಜುಕೊಳದ ಸಮೀಪ ವಿದ್ಯುತ್ ಕಂಬ ಉರುಳಿ ಬಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ