ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಡಿದ ಅಮಲು: ಪೊಲೀಸ್ ಜತೆ ಸಿಕ್ಕಿಂ ಯುವತಿ ರಂಪಾಟ! (Sikkim | Bangalore | Police | Kabban Park | Iran)
Bookmark and Share Feedback Print
 
ಇತ್ತೀಚೆಗಷ್ಟೇ ಇರಾನಿ ಯುವತಿಯರು ಕುಡಿದು ರಂಪಾಟ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಇದೀಗ ಸಿಕ್ಕಿ ಯುವತಿಯೊಬ್ಬಳು ಕುಡಿದು ವಾಹನ ಚಲಾಯಿಸಿ ಆಯತಪ್ಪಿ ಕೆಳಬಿದ್ದ ಸಂದರ್ಭದಲ್ಲಿ ತಪಾಸಣೆ ನಡೆಸಲು ಹೋದ ಪೊಲೀಸರಿಗೆ ಧಮಕಿ ಹಾಕಿದ ಘಟನೆ ಬುಧವಾರ ರಾತ್ರಿ ನಗರದಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಬೈಕ್‌ನ್ನು ವೇಗವಾಗಿ ಚಲಾಯಿಸಿ ಆಯತಪ್ಪಿ ಬಿದ್ದ ಸಂದರ್ಭದಲ್ಲಿ ಆಕೆಯ ನೆರವಿಗೆ ಆಗಮಿಸಿದ್ದ ಪೊಲೀಸರೊಂದಿಗೆ ಹೊಯ್ ಕೈ ನಡೆಸಿದ ಸಿಕ್ಕಿಂನ ಜೋಲ್ಜಾಯ ಡೋರ್ಜ್ ಬೋಲ್ಡ್ ಎಂಬಾಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಈಕೆ ತನ್ನ ಗೆಳತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬುಧವಾರ ರಾತ್ರಿ ಮನೆಗೆ ವಾಪಸಾಗುತ್ತಿದ್ದ ವೇಳೆ ತಿಮ್ಮಯ್ಯ ವೃತ್ತದ ಬಳಿ ಆಯತಪ್ಪಿ ಬಿದ್ದಾಗ, ಆಕೆಯ ನೆರವಿಗೆ ಸಂಚಾರಿ ಪೊಲೀಸರು ನೆರವಿಗೆ ಆಗಮಿಸಿದಾಗ ಜಟಾಪಟಿಗೆ ಇಳಿದಿದ್ದಳು.ಆಕೆ ಕುಡಿದಿರುವುದನ್ನು ಮನಗಂಡ ಪೊಲೀಸರು ದಂಡ ಪಾವತಿಸುವಂತೆ ಕೇಳಿದಾಗ ಪೊಲೀಸರ ಮೇಲೆಯೇ ಹರಿಹಾಯ್ದಿದ್ದಳು. ಕೊನೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಾಹನ ಜಪ್ತಿ ಮಾಡಿ ಆಕೆಯನ್ನು ಬಂಧಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ