ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊಗೇನಕಲ್: ರಾಜ್ಯದ ಕೂಗಿಗೆ ಸೊಪ್ಪು ಹಾಕದ ತಮಿಳುನಾಡು! (Tamil Nadu | Hogenakkal project | Stalin | Chennai)
Bookmark and Share Feedback Print
 
PTI
ಹೊಗೇನಕಲ್ ನೀರಾವರಿ ಯೋಜನೆಯ ಮೂಲ ಒಪ್ಪಂದ ಉಲ್ಲಂಘಿಸಿ ಅಕ್ರಮವಾಗಿ ಕಾಮಗಾರಿ ಕೈಗೆತ್ತಿಕೊಂಡಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ತಮಿಳುನಾಡು ಸಾರಸಗಟಾಗಿ ತಳ್ಳಿಹಾಕಿದ್ದು, ನಿಗದಿತ ಅವಧಿಯಲ್ಲೇ ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದೆ.

ಹೊಗೇನಕಲ್ ಯೋಜನೆಯಲ್ಲಿ 1.7 ಟಿಎಂಸಿ ಅಥವಾ 2.5 ಟಿಎಂಸಿ ಹೆಚ್ಚುವರಿಯಾಗಿ ಬಳಸಿಕೊಂಡು ಕಾಮಗಾರಿ ಕೈಗೊಂಡಿದೆ ಎಂಬ ಕರ್ನಾಟಕ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಅವರ ಆರೋಪವನ್ನು ತಳ್ಳಿಹಾಕಿದ ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನಾವು ಮೂಲ ಯೋಜನೆಯಂತೆಯೇ ಕೇಂದ್ರದ ಅನುಮತಿ ಮೇರೆಗೆ 1.4 ಟಿಎಂಸಿಯ ಕಾಮಗಾರಿಯನ್ನಷ್ಟೇ ಕೈಗೆತ್ತಿಕೊಂಡಿರುವುದಾಗಿ ತಮಿಳುನಾಡು ಅಸೆಂಬ್ಲಿಗೆ ಶುಕ್ರವಾರ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಹೊಗೇನಕಲ್ ವಿವಾದ ಕುರಿತಂತೆ ಎಐಎಡಿಎಂಕೆ ಸದಸ್ಯ ಕೆ.ಪಿ.ಅನ್ಬಾಗನ್ ತಮಿಳುನಾಡು ವಿಧಾನಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಹೊಗೇನಕಲ್ ಯೋಜನೆಯಲ್ಲಿ ಗಡಿ ಸೇರಿದಂತೆ ಯಾವುದೇ ರೀತಿಯಲ್ಲೂ ಮೂಲ ಒಪ್ಪಂದ ಉಲ್ಲಂಘಿಸಿ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಸಮರ್ಥನೆ ನೀಡಿದರು.

ಆ ನಿಟ್ಟಿನಲ್ಲಿ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ನೀರೊದಗಿಸುವ ಹೊಗೇನಕಲ್ ನೀರಾವರಿ ಯೋಜನೆಯನ್ನು ನಿಗದಿತ ಅವಧಿಯಲ್ಲೇ (2012) ಪೂರ್ಣಗೊಳಿಸುವುದಾಗಿಯೂ ಅವರು ಈ ಸಂದರ್ಭದಲ್ಲಿ ಸದನದಲ್ಲಿ ಭರವಸೆ ನೀಡಿದರು.

ತಮಿಳುನಾಡು ಕ್ಯಾತೆ-ಕರ್ನಾಟಕ ಮೌನ: ಸುಮಾರು 1334ಕೋಟಿ ರೂಪಾಯಿ ವೆಚ್ಚದಲ್ಲಿ ತಮಿಳುನಾಡು ಸರ್ಕಾರ ಹೊಗೇನಕಲ್ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ತಮಿಳುನಾಡು ಮೂಲ ಒಪ್ಪಂದವನ್ನೇ ಉಲ್ಲಂಘಿಸಿ ವಿವಾದಿತ ಹೊಗೇನಕಲ್ ನೀರಾವರಿ ಯೋಜನೆಯ ಕಾಮಗಾರಿಯನ್ನು ಭರದಿಂದ ನಡೆಸುತ್ತಿದೆ.

ಆದರೆ ಒಂದೆಡೆ ತಮಿಳುನಾಡು ಸರ್ಕಾರ ಹೊಗೇನಕಲ್ ಯೋಜನೆಯನ್ನು ಕೇಂದ್ರದ ಅನುಮತಿಯಂತೆ ಕೈಗೊಂಡಿರುವುದಾಗಿ ಸಮಜಾಯಿಷಿ ನೀಡಿ ಕಾಮಗಾರಿಯನ್ನು ಮುಂದುವರಿಸಿದೆ. ಕರ್ನಾಟಕ ಮಾತ್ರ ಹೊಗೇನಕಲ್ ವಿವಾದದ ಬಗ್ಗೆ ಪ್ರಧಾನಿ ಮಧ್ಯ ಪ್ರವೇಶಿಸಬೇಕು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ತಮಿಳುನಾಡು ಮಾತ್ರ 2012ರಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಘೋಷಿಸಿದೆ!
ಸಂಬಂಧಿತ ಮಾಹಿತಿ ಹುಡುಕಿ