ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾವು ಕಾಮಗಾರಿ ಆರಂಭಿಸ್ತೇವೆ: ತಮಿಳುನಾಡಿಗೆ ಕರ್ನಾಟಕ ಸಡ್ಡು (Kumaraswamy | Kharge | Karnataka | Hogenakkal | KRV)
Bookmark and Share Feedback Print
 
NRB
ಉಭಯ ರಾಜ್ಯಗಳ ನಡುವಿನ ಮೂಲ ಒಪ್ಪಂದ ಉಲ್ಲಂಘಿಸಿ ತಮಿಳುನಾಡು ಹೊಗೇನಕಲ್ ಕುಡಿಯುವ ನೀರಾವರಿ ಯೋಜನೆಯ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಕೂಡ ಹೊಗೇನಕಲ್ ಜಲ ವಿದ್ಯುತ್ ಯೋಜನೆಗೆ ಸಿದ್ದತೆ ನಡೆಸುವ ಮೂಲಕ ಟಾಂಗ್ ಕೊಡಲು ಮುಂದಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಹೊಗೇನಕಲ್ ಕುಡಿಯುವ ನೀರಾವರಿ ಯೋಜನೆ ವಿವಾದ ಕುರಿತಂತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಕರ್ನಾಟಕದ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆ ನಿಟ್ಟಿನಲ್ಲಿ ಶೀಘ್ರವೇ ತಮಿಳುನಾಡು ಮುಖ್ಯಮಂತ್ರಿ ಅವರೊಂದಿಗೂ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು. ಹೊಗನೇಕಲ್ ವಿವಾದ ಕುರಿತಂತೆ ತಮಿಳುನಾಡಿನ ಸ್ಪಷ್ಟನೆ ಕೇಳಲಾಗುವುದು ಎಂದರು.

ಖರ್ಗೆ-ಎಚ್‌ಡಿಕೆ ಮನೆ ಮುಂದೆ ಕರವೇ ಪ್ರತಿಭಟನೆ: ನೆರೆಯ ತಮಿಳುನಾಡು ಸರ್ಕಾರ ಹೊಗನೇಕಲ್ ನೀರಾವರಿ ಯೋಜನೆ ಕಾಮಗಾರಿ ಕೈಗೆತ್ತಿಕೊಂಡಿದ್ದರ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮೌನ ವಹಿಸಿರುವ ಕಾಂಗ್ರೆಸ್‌ ಹಿರಿಯ ಮುಖಂಡ, ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಹೊಗೇನಕಲ್ ವಿವಾದದ ಬಗ್ಗೆ ರಾಜ್ಯದ, ಸಚಿವರು, ಸಂಸದರು ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.

ಅಲ್ಲದೇ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಮುಂದೆಯೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸಂಸದರ ಮೌನ ನೀತಿಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ನಿರತ ಸುಮಾರು 30ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜ್ಯದ ಸಂಸದರು ಮೌನ ಮುರಿಯಲಿ: ಹೊಗೇನಕಲ್ ನೀರಾವರಿ ಯೋಜನೆ ವಿವಾದದ ಬಗ್ಗೆ ರಾಜ್ಯದ ಸಂಸದರು, ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಜಂಟಿ ಸರ್ವೆಗೆ ಒತ್ತಾಯಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗ್ರಹಿಸಿದ್ದಾರೆ.

ರಾಜ್ಯದ ಸಂಸದರು ಲೋಕಸಭೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತದ ಪರಿಣಾಮ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಿ ಎಚ್ಚರಿಸುವ ಕೆಲಸಕ್ಕೆ ಮುಂದಾಗಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ