ನಿತ್ಯಾನಂದ ವಶ ಸಾಧ್ಯವಿಲ್ಲ: ಪಾಂಡಿಚೇರಿ ಪೊಲೀಸ್‌ಗೆ ಕೋರ್ಟ್
ಬೆಂಗಳೂರು, ಬುಧವಾರ, 5 ಮೇ 2010( 13:11 IST )
PTI
ನಟಿ ರಂಜಿತಾಳೊಂದಿಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಕೋರಿ ನೆರೆಯ ಪಾಂಡಿಚೇರಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ರಾಸಲೀಲೆ ಪ್ರಕರಣದ ಕುರಿತಂತೆ ಪಾಂಡಿಚೇರಿ ಕೋರ್ಟ್ ನಿತ್ಯಾನಂದನ ವಿರುದ್ಧ ಬಾಡಿ ವಾರಂಟ್ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗಾಗಿ ಕಾಮಿಸ್ವಾಮಿ ನಿತ್ಯಾನಂದನನ್ನು ತಮ್ಮ ವಶಕ್ಕೆ ನೀಡಬೇಕೆಂದು ಪಾಂಡಿಚೇರಿ ಪೊಲೀಸರು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪಾಂಡಿಚೇರಿ ಪೊಲೀಸರ ಮನವಿಯ ವಿಚಾರಣೆ ನಡೆಸಿದ ರಾಮನಗರ ಕೋರ್ಟ್‌ನ ನ್ಯಾಯಾಧೀಶರಾದ ನಾರಾಯಣ್ ಪ್ರಸಾದ್, ಒಬ್ಬ ವ್ಯಕ್ತಿ ಕಾರಾಗೃಹದಲ್ಲಿ ಇರುವ ಸಂದರ್ಭದಲ್ಲಿ ವಶಕ್ಕೆ ನೀಡುವುದು ಅಸಾಧ್ಯ ಎಂದು ತಿಳಿಸಿದ್ದು, ನಿತ್ಯಾನಂದನಿಗೆ ಜಾಮೀನು ಸಿಕ್ಕಲ್ಲಿ ನಿಮ್ಮ ವಶಕ್ಕೆ ಪಡೆಯಿರಿ ಎಂದು ಪಾಂಡಿಚೇರಿ ಪೊಲೀಸರಿಗೆ ಸಲಹೆ ನೀಡಿದ್ದಾರೆ.
ಒಟ್ಟಾರೆ ರಾಸಲೀಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಮಿ ನಿತ್ಯಾನಂದ ಸ್ವಾಮಿ ಇದೀಗ ಮತ್ತೊಂದು ಜೈಲಿಗೆ ಹೋಗಲು ಸಿದ್ದತೆ ನಡೆಸಿಕೊಳ್ಳಬೇಕಾಗಿದೆ. ಈಗಾಗಲೇ ರಾಮನಗರ ಜೈಲಿನಲ್ಲಿ ಹಸನ್ಮುಖಿಯಾಗಿಯೇ ಕಾಲಕಳೆಯುತ್ತಿದ್ದಾನೆ.