ಬೆಂಗಳೂರು/ನವದೆಹಲಿ, ಮಂಗಳವಾರ, 11 ಮೇ 2010( 10:08 IST )
WD
ಅರಮನೆಗಳ ನಗರ ಖ್ಯಾತಿಯ ನಮ್ಮ ಹೆಮ್ಮೆಯ ಮೈಸೂರು ಇದೇಗ ಇಡೀ ಭಾರತ ದೇಶದಲ್ಲೇ ಎರಡನೇ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ದೇಶದಾದ್ಯಂತ ನಗರಗಳ ಸ್ವಚ್ಛತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಚಂಢೀಗಢ ಮೊದಲ ಸ್ಥಾನ ಪಡೆದರೆ, ಕರ್ನಾಟಕದ ಮೈಸೂರು ಎರಡನೇ ಸ್ಥಾನ ಗಳಿಸಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಅವರು ದೇಶದ 25 ಅತ್ಯುತ್ತಮ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಕೇವಲ ಮೈಸೂರಲ್ಲದೆ, ರಾಜ್ಯದ ಇನ್ನೂ ನಾಲ್ಕು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ನಮ್ಮ ಹೆಮ್ಮೆಯ ಕರಾವಳಿ ತೀರ ಮಂಗಳೂರು ಕೂಡಾ ಸ್ವಚ್ಛತೆಯಲ್ಲಿ ತಾನೇನು ಕಡಿಮೆಯಿಲ್ಲ ಎಂಬಂತೆ ಎಂಟನೇ ಸ್ಥಾನ ಪಡೆದರೆ, ಉದ್ಯಾನ ನಗರಿ ಬೆಂಗಳೂರು 12ನೇ ಸ್ಥಾನದಲ್ಲಿದೆ. ಮಂಡ್ಯ 15ನೇ ಸ್ಥಾನ ಹಾಗೂ ಬೀದರ್ 22ನೇ ಸ್ಥಾನ ಪಡೆದಿರುವುದೂ ಕೂಡಾ ಗಮನಾರ್ಹ. ಆದರೆ ಹಸಿರು ಪ್ರಕೃತಿಯ ಮಡಿಲು ಶಿವಮೊಗ್ಗ ಮಾತ್ರ 166ನೇ ಸ್ಥಾನದಲ್ಲಿರುವುದು ಬೇಸರದ ಸಂಗತಿ.
ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಅವರು ದೇಶದ 25 ಅತ್ಯುತ್ತಮ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಎರಡನೇ ಸ್ಥಾನ ಪಡೆದಿದ್ದು ಅತ್ಯಂತ ಸಂತೋಷ. ರಾಜ್ಯದ ನಾಲ್ಕು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುರು ಹೆಮ್ಮೆ ತಂದಿದೆ ಎಂದು ಕಾನೂನು, ಸಂಸದೀಯ ಹಾಗೂ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.