ರಾಜ್ಯಪಾಲರಿಗೆ ನೋಟಿಸ್ ನೀಡುವ ಅಧಿಕಾರವಿಲ್ಲವೆಂದು ಎಂದು ಹೇಳುವ ಅಧಿಕಾರ ಸಚಿವ ಜನಾರ್ದನ ರೆಡ್ಡಿ ಅವರಿಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೂರು-ಆಕ್ಷೇಪಣೆಗಳು ಬಂದ ಸಂದರ್ಭದಲ್ಲಿ ಅದನ್ನು ಸ್ವೀಕರಿಸಿ ವಿಚಾರಣೆ ನಡೆಸುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ ಇದನ್ನು ಅರಿಯದ ಜನಾರ್ದನ ರೆಡ್ಡಿ ಮೊದಲು ಕಾನೂನು ಜ್ಞಾನ ಇಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಯಾವುದೇ ಆದೇಶಗಳಿದ್ದರೂ ಅದು ರಾಜ್ಯಪಾಲರ ಮುಖೇನ ನಡೆಯಬೇಕು. ಆದರೆ ಇದರ ಅರಿವು ಜನಾರ್ದನ ರೆಡ್ಡಿ ಅವರಿಗಿಲ್ಲ ಎಂದು ಟೀಕಿಸಿದರು.
ರಾಜ್ಯಪಾಲರಿಗಿರುವ ಅಧಿಕಾರದ ಹಿನ್ನೆಲೆಯಲ್ಲೇ ಬಳ್ಳಾರಿ ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದೆ. ಹಲವಾರು ದೂರುಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ನಮ್ಮ ಪಕ್ಷದ ಸದಸ್ಯರು ರಾಜ್ಯಪಾಲರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.